ಮಹಿಳೆಯರಿಗೆ ಪ್ರಧಾನಿ ಮೋದಿ ಗಿಫ್ಟ್!

ಶುಕ್ರವಾರ, 14 ಏಪ್ರಿಲ್ 2017 (08:39 IST)
ನವದೆಹಲಿ:  ಸ್ತ್ರೀ ಸಬಲೀಕರಣದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ವಿವಾಹವಾದ ಮಾತ್ರಕ್ಕೆ ಮಹಿಳೆಯರು ತಮ್ಮ ಪಾಸ್ ಪೋರ್ಟ್ ನಲ್ಲಿ ಹೆಸರು ಬದಲಾಯಿಸಬೇಕಿಲ್ಲ ಎಂದಿದ್ದಾರೆ.

 
ಐಎಂಸಿ ಲೇಡೀಸ್ ವಿಂಗ್ ನ 50 ನೇ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಾ ಈ ವಿಷಯ ಹೇಳಿದ್ದಾರೆ. ಮದುವೆಯಾದ ಬಳಿಕ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವಾಗ ಹೆಸರು ಬದಲಾಯಿಸಬೇಕೆಂದೇನಿಲ್ಲ. ಅಂತೆಯೇ, ವಿಚ್ಛೇದಿತ ಮಹಿಳೆ ತನ್ನ ವೈವಾಹಿಕ ಜೀವನದ ವಿವರಣೆಯನ್ನು ಕೊಡಬೇಕಿಲ್ಲ.

ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ತನ್ನ ತಂದೆ, ತಾಯಿಯ ವಿವರಣೆ ಕೊಡಬೇಕೇ ಅಥವಾ ಗಂಡನ ವಿವರಣೆ ಕೊಡಬೇಕೇ ಎನ್ನುವುದು ಅವರವರಿಗೆ ಬಿಟ್ಟ ವಿಚಾರ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ