ಜಾತ್ಯಾತೀತ, ಸಮಾಜವಾದ ಪದಗಳನ್ನು ಸಂವಿಧಾನದಿಂದ ತೆಗೆದುಹಾಕಿ ಭಾರತ ಹಿಂದೂ ರಾಷ್ಟ್ರ: ಶಿವಸೇನೆ

ಬುಧವಾರ, 28 ಜನವರಿ 2015 (18:08 IST)
ದೇಶದ ಸಂವಿಧಾನದಿಂದ ಜಾತ್ಯಾತೀತ ಮತ್ತು ಸಮಾಜವಾದ ಪದಗಳನ್ನು ತೆಗೆದುಹಾಕಬೇಕು. ಭಾರತ ಕೇವಲ ಹಿಂದೂ ರಾಷ್ಟ್ರವಾಗಿದೆ ಎಂದು ಶಿವಸೇನೆ ನೀಡಿದ ಹೇಳಿಕೆ ಮೈತ್ರಿಪಕ್ಷವಾದ ಬಿಜೆಪಿಗೆ ಮತ್ತೊಂದು ವಿವಾದಕ್ಕೆ ಸಿಲುಕಿಸಲಿದೆ.
 
ಸಂವಿಧಾನದಲ್ಲಿನ ಸಮಾಜವಾದ ಮತ್ತು ಜಾತ್ಯಾತೀತ ಪದಗಳನ್ನು ತೆಗೆದುಹಾಕಬೇಕು ಎನ್ನುವುದು ವಿವಾದವಲ್ಲ. ನೂರಾರು ಕೋಟಿ ಜನತೆಯ ಅನಿಸಿಕೆಗಳಾಗಿವೆ.ಭಾರತ ದೇಶ ಹಿಂದೂಗಳಿಗೆ ಮಾತ್ರ ಸೇರಿದ್ದು ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
 
ಯಾವುದೇ ಧರ್ಮದ ಜನತೆ ದೇಶದಲ್ಲಿ ವಾಸಿಸಬಹುದು. ಆದರೆ, ಹಿಂದೂಗಳ ಪ್ರಾಬಲ್ಯವನ್ನು ತಡೆಯಲು ಪ್ರಯತ್ನಿಸಬಾರದು ಎಂದು ಹೇಳಿಕೆ ನೀಡಿದ್ದಾರೆ.
 
ಶಿವಸೇನೆಯ ಹೇಳಿಕೆಯನ್ನು ವಿಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಭಾರತ ಜಾತ್ಯಾತೀತ ರಾಷ್ಟ್ರ ಹಿಂದೂ ರಾಷ್ಟ್ರವಲ್ಲ. ಸಂವಿಧಾನದಿಂದ ಜಾತ್ಯಾತೀತ ಪದವನ್ನು ತೆಗೆಯುವುದು ಸಾಧ್ಯವಿಲ್ಲ. ಇದೊಂದು ಸಂವಿಧಾನಕ್ಕೆ ಅಪಚಾಕ ಬಗೆಯುವ ಹುನ್ನಾರ ಎಂದು ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ತಿರುಗೇಟು ನೀಡಿದ್ದಾರೆ. 
 
ಬಿಜೆಪಿ ಪಕ್ಷಕ್ಕೆ ಭಾರತ ಕೇವಲ ಹಿಂದೂ ರಾಷ್ಟ್ರವಾಗುವುದು ಬೇಕಾಗಿದೆಯೇ ಹೊರತು ಜಾತ್ಯಾತೀತ ರಾಷ್ಟ್ರವಲ್ಲ.ಬಂಡವಾಳ ಶಾಹಿ ಹಿಂದೂ ರಾಷ್ಟ್ರ ಮಾತ್ರ ಬಿಜೆಪಿ ಬಯಸುತ್ತಿದೆ ಎಂದು ಎನ್‌ಸಿಪಿ ಮುಖಂಡ ನವಾಬೇ ಮಲಿಕ್ ಕಿಡಿಕಾರಿದ್ದಾರೆ.
 

ವೆಬ್ದುನಿಯಾವನ್ನು ಓದಿ