ವಧುವಾಗಬೇಕಿದ್ದ ಅವಳು ಅವನಾದಾಗ ವರನಾದವನಿಗೆ....

ಶುಕ್ರವಾರ, 18 ಜುಲೈ 2014 (16:56 IST)
ತಾನು ವರಿಸಬೇಕಿದ್ದ ಯುವತಿ ಹೆಣ್ಣಲ್ಲ ಗಂಡು ಎಂದು ತಿಳಿದು ಕಿಶೋರ್ ಎನ್ನುವ ಯುವಕ ಆಘಾತಗೊಂಡು ಪೊಲೀಸರಿಗೆ ದೂರು ನೀಡಿದ ಘಟನೆ ಚತ್ತೀಸ್‌ಗಡ್ ರಾಜ್ಯದ ಜಶಪುರ್ ಜಿಲ್ಲೆಯಲ್ಲಿ ವರದಿಯಾಗಿದೆ. 
 
ಪೊಲೀಸ್ ವರದಿಗಳ ಪ್ರಕಾರ, ಕಿಶೋರ್ ತನ್ನ ಗೆಳೆಯನಿಂದ ಯುವತಿಯೊಬ್ಬಳ ಮೊಬೈಲ್ ನಂಬರ್ ಪಡೆದು ಪರಿಚಯ ಮಾಡಿಕೊಂಡು, ಸ್ನೇಹ ಬೆಳೆಸಿದ. ಕೆಲ ದಿನಗಳಲ್ಲೇ ಸ್ನೇಹ ಸಂಬಂಧವಾಗಿ ಪರಿವರ್ತಿತಗೊಂಡಿತು. ಕಿಶೋರ್, ಮೊಬೈಲ್ ಕರೆ ಮಾಡುತ್ತಿದ್ದ ಯುವತಿ ನೇಹಾ ಪನ್ನಾಳೊಂದಿಗೆ ಮದುವೆಯಾಗಲು ಕೂಡಾ ಸಿದ್ದವಾದ.
 
ಒಂದು ದಿನ ನೇಹಾ ಕಿಶೋರ್‌ನನ್ನು ಭೇಟಿ ಮಾಡಲು ಆತನ ಮನೆಗೆ ಬಂದು ನಾಲ್ಕು ದಿನಗಳ ಕಾಲ ಮನೆಯಲ್ಲಿ ಉಳಿದು ಕುಟುಂಬದ ಸದಸ್ಯರ ಪರಿಚಯ ಮಾಡಿಕೊಂಡಿದ್ದಾಳೆ(ನೆ).ಮುಖದ ತುಂಬಾ ಸೆರಗು ಹೊದ್ದಿದ್ದರಿಂದ ಆಕೆಯ ಮುಖದ ಪರಿಚಯ ಯಾರಿಗೂ ಆಗಿರಲಿಲ್ಲ. ನಂತರ ಆಕೆ ನಾನು ನನ್ನ ಮನೆಗೆ ಹೋಗುವುದಿಲ್ಲ. ನಿನ್ನ ಜೊತೆಯಿರುವುದಾಗಿ ಕಿಶೋರ್‌ನೊಂದಿಗೆ ಹಟ ಹಿಡಿದಿದ್ದಾಳೆ.  
 
ತಂದೆ ತಾಯಿಯ ವಿರೋಧಧ ಮಧ್ಯೆಯೂ ಕಿಶೋರ್ ಬಾಡಿಗೆ ಕಾರು ಪಡೆದುಕೊಂಡು ಯುವತಿ ನೇಹಾಳನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಲು ರೆಡಿಯಾಗಿದ್ದಾನೆ. ಆದರೆ, ಪ್ರತಿ ಬಾರಿಯೂ ತಪ್ಪು ದಾರಿಯನ್ನು ತೋರಿಸುತ್ತಾ ನನ್ನ ಮನೆ ದಾರಿ ತಪ್ಪಿಹೋಗಿದೆ ಎಂದು ಸುಳ್ಳು ಹೇಳಲು ಆರಂಭಿಸಿದ್ದಾಳೆ. ಆಕೆಯ ವರ್ತನೆಯಿಂದ ರೋಸಿ ಹೋದ ಕಿಶೋರ್ ಪೊಲೀಸರಿಗೆ ದೂರು ನೀಡಿದ್ದಾನೆ.  
 
ಪೊಲೀಸರು ನೇಹಾಳನ್ನು ವಿಚಾರಣೆ ನಡೆಸಿದಾಗಲೂ ಮನೆಯ ತಪ್ಪು ವಿಳಾಸವನ್ನು ನೀಡಿದ್ದಾಳೆ. ನಂತರ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೂಡಲೇ ಜಾಗೃತಳಾದ ನೇಹಾ ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ, ಕಿಶೋರ್ ಕುಟುಂಬದ ಸದಸ್ಯರ ನೆರವಿನಿಂದ ಪೊಲೀಸರು ಆಕೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.
 
ಪೊಲೀಸರ ಲಾಠಿ ಚಾರ್ಜ್‌ಗೆ ತತ್ತರಿಸಿದ ನೇಹಾ ತಾನು ಹೆಣ್ಣಲ್ಲ. ಹೆಣ್ಣಿನಂತೆ ಡ್ರೆಸ್ ಧರಿಸಿದ ಯುವಕ ಎಂದು ಬೊಬ್ಬೆ ಹೊಡೆದಿದ್ದಾನೆ. 
 
ಕಿಶೋರ್ ಮನೆಗೆ ನುಗ್ಗಿ ಅವನೊಂದಿಗೆ ವಿವಾಹ ಮಾಡಿಕೊಳ್ಳುವ ಉದ್ದೇಶದ ಹಿಂದಿರುವ ಸಂಚಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಅರವಿಂದ್ ಮಿಶ್ರಾ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ