ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗೆ 1.02 ಕೋಟಿ ರೂ. ಉದ್ಯೋಗದ ಆಫರ್

ಬುಧವಾರ, 2 ಮಾರ್ಚ್ 2016 (16:58 IST)
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ವಾರ್ಷಿಕ 1.02 ಕೋಟಿ ರೂಪಾಯಿಗಳ ವೇತನ ನೀಡುವ ಉದ್ಯೋಗ ಅರಸಿ ಬಂದಿದೆ ಎಂದು ಮೂಲಗಳು ತಿಳಿಸಿವೆ.
 
ಫಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್(ಎಫ್‌ಎಂಎಸ್) ವಿಬಾಗದ ವಿದ್ಯಾರ್ಥಿಗೆ ಉದ್ಯೋಗದ ಆಹ್ವಾನ ಬಂದಿದೆ. ಎಫ್‌ಎಂಎಸ್ ವಿಭಾಗದ ವಿದ್ಯಾರ್ಥಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂತಹ ಮನ್ನಣೆ ಮೊದಲ ಬಾರಿಗೆ ದೊರೆತಿದೆ.
 
ಏತನ್ಮಧ್ಯೆ, ದೇಶಿಯ ಕಂಪೆನಿಗಳು ಎಫ್‌ಎಂಎಸ್ ವಿಭಾಗದ ವಿದ್ಯಾರ್ಥಿಗಳಿಗೆ ಕಳೆದ ವರ್ಷ ವಾರ್ಷಿಕವಾಗಿ 66 ಲಕ್ಷ ರೂಪಾಯಿ ವೇತನದ ಉದ್ಯೋಗ ಆಹ್ವಾನ ಬಂದಿತ್ತು. ಪ್ರಸಕ್ತ ವರ್ಷದಲ್ಲಿ ಎಫ್‌ಎಂಎಸ್ ವಿದ್ಯಾರ್ಥಿಗಳಿಗೆ 35 ಲಕ್ಷ ರೂಪಾಯಿ ವೇತನದ ಉದ್ಯೋಗ ಆಹ್ವಾನ ನೀಡಲಾಗಿತ್ತು.
 
ಎಫ್‌ಎಂಎಸ್ ವಿಭಾಗದ ವಿದ್ಯಾರ್ಥಿಗಳಿಗೆ ಸರಾಸರಿ 20.5 ಲಕ್ಷ ರೂಪಾಯಿಗಳ ವೇತನದ ಪ್ಯಾಕೇಜ್‌ ಉದ್ಯೋಗ ಆಹ್ವಾನ ಸಾಮಾನ್ಯವಾಗಿತ್ತು.
 
ಪ್ರಸಕ್ತ ವರ್ಷದಲ್ಲಿ ಎಫ್‌ಎಂಎಸ್ ವಿಭಾಗದ ಶೇ.100 ರಷ್ಟು ವಿದ್ಯಾರ್ಥಿಗಳು ಉದ್ಯೋಗ ಪಡೆದಿದ್ದಾರೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
 
ಕೋಕಾಕೋಲಾ, ಗೇಲ್, ಹೈಂಜ್, ಮೈಕ್ರೋಸಾಫ್ಟ್, ನೆಸ್ಟೆಲೆ, ಪೆಪ್ಸಿಕೊ, ಅಮೆರಿಕನ್ ಎಕ್ಸ್‌ಪ್ರೆಸ್, ಮೊರ್ಗನ್ ಸ್ಟಾನ್ಲೆ, ಸ್ಟ್ಯಾಂಡರ್ಡ್ ಚಾರ್ಟರ್ಡ್, ಟ್ರೈಡೆಂಟ್ ಗ್ರೂಪ್, ವೋಡಾಫೋನ್ ಮತ್ತು ಯೇಸ್ ಬ್ಯಾಂಕ್‌ಗಳು ಎಫ್‌ಎಂಎಸ್ ವಿದ್ಯಾರ್ಥಿಗಳನ್ನು ಉದ್ಯೋಗಿಗಳಾಗಿ ಆಯ್ಕೆ ಮಾಡಿವೆ.
 

ವೆಬ್ದುನಿಯಾವನ್ನು ಓದಿ