ಉಪಚುನಾವಣಾ ಸೋಲಿನ ಎರಡೇ ಗಂಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಹೈಕಮಾಂಡ್`ಗೆ ಸೋಲಿನ ಕಾರಣಗಳನ್ನ ಪಟ್ಟಿ ಮಾಡಿ ವರದಿ ಸಲ್ಲಿಸಿದ್ದಾರೆ.
2 ಕ್ಷೇತ್ರಗಳು ಕಾಂಗ್ರೆಸ್`ನ ಭದ್ರಕೋಟೆ, ಉಪಚುನಾವಣೆಯಲ್ಲಿ ಶೇಕಡಾವಾರು ಮತ ಗಳಿಕೆ ಪ್ರಮಾಣ ಹೆಚ್ಚಾಗಿದೆ. ಮೈಸೂರು ವಲಯದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯುತ್ತಿದೆ. ನಂಜನಗೂಡಿನಲ್ಲಿ ಜೆಡಿಎಸ್ ಕೈಜೋಡಿಸಿದ್ದರಿಂದ ಕಾಂಗ್ರೆಸ್ ಗೆದ್ದಿದೆ. ಇವೇ ಮುಂತಾದ ಕಾರಣಗಳನ್ನ ನೀಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ವರದಿ ಪರಿಶೀಲಿಸಿದ ಬಳಿಕ ರಾಷ್ಟ್ರಾದ್ಯಕ್ಷ ಅಮಿತ್ ಶಾ, ಯಡಿಯೂರಪ್ಪಗೆ ಬುಲಾವ್ ನೀಡಿದ್ದಾರೆ. ಏಪ್ರಿಲ್ 15ರಂದು ಯಡಿಯೂರಪ್ಪ ಒಡಿಶಾದ ಭುವನೇಶ್ವರದಲ್ಲಿ ಅಮಿತ್ ಶಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಬಲವರ್ಧನೆ, ಉಪಚುನಾವಣೆ ಸೋಲಿಗೆ ಕಾರಣ ಮತ್ತು ನಾಯಕರ ಒಗ್ಗಟ್ಟು ಪ್ರದರ್ಸನ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.