ಉಗ್ರ ಯಾಕೂಬ್ ಅಂತಿಮ ಕ್ಷಣಗಳು ಹೀಗಿದ್ದವು

ಗುರುವಾರ, 30 ಜುಲೈ 2015 (11:06 IST)
1993ರ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಮೆಮನ್‍ನನ್ನು ಮಹಾರಾಷ್ಟ್ರದ ನಾಗ್ಪುರ್‌ನ ಕೇಂದ್ರ ಕಾರಾಗೃಹದಲ್ಲಿ ಇಂದು ಬೆಳಗ್ಗೆ 6.30ಕ್ಕೆ ನೇಣಿಗೇರಿಸಲಾಯಿತು. ಕಳೆದ 21 ವರ್ಷಗಳಿಂದ ಜೈಲಿನಿಂದ ಯಾಕೂಬ್ ತನ್ನ 53 ನೇ ಜನ್ಮದಿನದಂದೇ ಹೆಣವಾಗಿದ್ದಾನೆ.

ಸಾವಿಗೂ ಮುನ್ನ ಉಗ್ರ ಯಾಕೂಬ್ ಕೊನೆಯ ಕ್ಷಣಗಳು ಹೀಗಿದ್ದವು
 
* ನಸುಕಿನ ಜಾವ 3.30ಕ್ಕೆ ಹಾಸಿಗೆಯಿಂದ ಎದ್ದ ಯಾಕೂಬ್
 
*  ಬಿಸಿ ನೀರಿನ ಸ್ನಾನ ಮಾಡಿದ ಯಾಕೂಬ್
 
* ಸ್ನಾನ ಮುಗಿಸಿದ ಮೇಲೆ ಪೊಲೀಸ್ ಕಾನ್‌ಸ್ಟೇಬಲ್‌ಗಳು ತೊಟ್ಟ  ಹೊಸ ಉಡುಗೆ ತೊಟ್ಟ ಉಗ್ರ
 
* ನಮಾಜ್ ಮಾಡಿ ಕುರಾನ್ ಓದಲು ಅವಕಾಶ ಮಾಡಿಕೊಟ್ಟ ಜೈಲು ಅಧಿಕಾರಿಗಳು
 
* ಉಗ್ರನಿಗೆ ಇಷ್ಟವಾದ ಉಪಹಾರ ನೀಡಿದ ಅಧಿಕಾರಿಗಳು. 
 
* ಕೊನೆಯ ಬಾರಿ ವೈದ್ಯಕೀಯ ಪರೀಕ್ಷೆ

ಕೆಲವು ಮೂಲಗಳ ಪ್ರಕಾರ ಮೆಮನ್‌ ಬುಧವಾರದಿಂದಲೇ ಏನನ್ನೂ ಸೇವಿಸಿಲ್ಲ . ಆದರೆ ಆತ ಭೌತಿಕವಾಗಿ, ಮಾನಸಿಕವಾಗಿ ಆರೋಗ್ಯದಿಂದ ಇದ್ದ ಎಂದು ವೈದ್ಯಕೀಯ ವರದಿ ತಿಳಿಸಿದೆ. 
 
ನಂತರ  6.30ರಿಂದ 7 ಗಂಟೆಯ ನಡುವೆ  ಉಗ್ರನನ್ನು ನೇಣಿಗೇರಿಸಲಾಯಿತು. 
 
ಯಾಕೂಬ್ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಯಾಕೂಬ್‌ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪ್ರಚೋದನಕಾರಿ ಹೇಳಿಕೆ, ಬರಹಗಳನ್ನು ದಾಖಲಿಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. 
 
ಮೆಮನ್ ಮೃತದೇಹವನ್ನು ಆತನ ನಿವಾಸಕ್ಕೆ ಕೊಂಡೊಯ್ದು, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ಮುಂಬೈನಲ್ಲಿಯೇ ಅಂತ್ಯ ಸಂಸ್ಕಾರವನ್ನು ನಡೆಸಲಾಗುವುದು ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ