"ಯೋಗಾ" ಶಾಲೆಗಳಲ್ಲಿ ಕಡ್ಡಾಯವಲ್ಲ ಎಂದ ಮೋದಿ ಸರಕಾರ

ಶುಕ್ರವಾರ, 31 ಜುಲೈ 2015 (18:26 IST)
ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಯೋಗಾ ಕಡ್ಡಾಯ ಮಾಡುವಂತಹ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
 
ಏತನ್ಮಧ್ಯೆ, ಸಿಬಿಎಸ್‌ಇ ಅನನುಮೋದನೆ ಪಡೆದಿರುವ ಶಾಲೆಗಳಲ್ಲಿ ದೈಹಿಕ ಮತ್ತು ಆರೋಗ್ಯ ಶಿಕ್ಷಣಜ ಜೊತೆಗೆ ಯೋಗಾ ಕೂಡಾ ಒಂದು ವಿಷಯವಾಗಿ ಪರಿಗಣಿಸಲಾಗುತ್ತದೆ ಎಂದು ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಗೆ ತಿಳಿಸಿದ್ದಾರೆ. 
 
ಹಿರಿಯ ಸೆಕೆಂಡರಿ ಮಟ್ಟದಲ್ಲಿ ದೈಹಿಕ ಶಿಕ್ಷಣ ಕಲಿಕೆಯ ಜೊತೆಗೆ ಯೋಗಾ ಕೂಡಾ ಸೇರ್ಪಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ.
 
ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಶನ್ ಪ್ರಕಾರ ಅರೋಗ್ಯ, ಪೋಷಕಾಂಶ, ದೈಹಿಕ ಕ್ಷಮತೆ ಅಡಿಯಲ್ಲಿ ಯೋಗಾ ಕೂಡಾ ಸೇರಿಸಿದಲ್ಲಿ ವಿದ್ಯಾರ್ಥಿಗಳ ದೈಹಿಕ ಫಿಟ್‌‍ನೆಸ್‌ಗೆ ಸಹಕಾರಿಯಾಗಲಿದೆ ಎಂದು ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ