ಖ್ಯಾತ ಯೋಗಗುರು ಅಯ್ಯಂಗಾರ್ ಇನ್ನಿಲ್ಲ

ಬುಧವಾರ, 20 ಆಗಸ್ಟ್ 2014 (08:28 IST)
ಮೈಸೂರು ಮೂಲದ ಖ್ಯಾತ ಯೋಗಗುರು , ಟೈಮ್ಸ್ ಪ್ರಕಟಿಸಿದ ವಿಶ್ವದ 100 ಜನಪ್ರಿಯ ವ್ಯಕ್ತಿಗಳಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಕರ್ನಾಟಕದ ಹೆಮ್ಮೆಯ ಪುತ್ರ  ಬಿಕೆಎಸ್ ಅಯ್ಯಂಗಾರ್ ಇಂದು ಮುಂಜಾನೆ 3.15ಕ್ಕೆ ಪುಣೆಯ ಪ್ರಯಾಗ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಡಿಸೆಂಬರ್ 14, 1918ರಲ್ಲಿ ಕೋಲಾರದ ಬೆಳ್ಳೂರಿನಲ್ಲಿ ಜನಿಸಿದ್ದ ಅವರಿಗೆ 96 ವರ್ಷ ವಯಸ್ಸಾಗಿತ್ತು.

96 ವರ್ಷವಾದರೂ ಆರೋಗ್ಯವಾಗಿದ್ದ ಅವರು ಇತ್ತೀಚಿಗೆ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, ಡಯಾಲಿಸಿಸ್‌ ಚಿಕಿತ್ಸೆಗೂ ಸ್ಪಂದಿಸದೇ  ಮುಂಜಾನೆ ಕೊನೆಯುಸಿರೆಳೆದಿದ್ದಾರೆ. 
 
ತಮ್ಮ ಯೋಗಸಾಧನೆಯಿಂದ, ಯೋಗಕ್ರಾಂತಿಯಿಂದ ವಿಶ್ವವಿಖ್ಯಾತರಾಗಿದ್ದ ಅವರು ದೇಶದ ಉನ್ನತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದರಲ್ಲದೇ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದರು. ದೇಶವಿದೇಶಗಳಲ್ಲಿ ಅವರಿಗೆ ಲಕ್ಷಾಂತರ ಶಿಷ್ಯಂದಿರಿದ್ದು, ಜಗತ್ತಿನಲ್ಲೆಡೆ ಯೋಗಕೇಂದ್ರಗಳು ಸ್ಥಾಪನೆಯಾಗಲು, ಯೋಗ ಪ್ರಸರಿಸಲು ಅವರೇ ಪ್ರಮುಖ ಕಾರಣರೆನಿಸಿದ್ದಾರೆ.
 
ಯೋಗಕಲಿಕಾ ಕೇಂದ್ರವನ್ನು ಸ್ಥಾಪಿಸಿದ್ದ ಅವರನ್ನು ಯೋಗ ಪಿತಾಮಹರೆಂದು ಕರೆಯಲಾಗುತ್ತಿತ್ತು. 

ವೆಬ್ದುನಿಯಾವನ್ನು ಓದಿ