ದೇಶ, ವಿದೇಶಗಳನ್ನು ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ: ಪ್ರಧಾನಿ ಮೋದಿ

ಭಾನುವಾರ, 21 ಜೂನ್ 2015 (12:55 IST)
ನಮ್ಮ ಸಲಹೆ ಸ್ವೀಕರಿಸಿದ್ದಕ್ಕೆ ವಿಶ್ವಸಂಸ್ಥೆಗೆ ಧನ್ಯವಾದ.  193 ದೇಶಗಳು ಯೋಗವನ್ನು ಸಮರ್ಥಿಸಿದ್ದು, ನಮ್ಮ ಪ್ರಸ್ತಾವನೆ ಸಮರ್ಥಿಸಿದ್ದಕ್ಕೆ ಆಭಾರಿಯಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ವಿಜ್ಞಾನಭವನದಲ್ಲಿ  ಯೋಗ ಸಮ್ಮೇಳನದಲ್ಲಿ ಮಾತನಾಡುತ್ತಾ  ಹೇಳಿದರು .   ಈ ರೀತಿ ಪ್ರತಿಕ್ರಿಯೆ ಸಿಗುತ್ತದೆಂದು ನಿರೀಕ್ಷಿಸಿರಲಿಲ್ಲ.  ದೇಶ, ದೇಶಗಳನ್ನು ಒಗ್ಗೂಡಿಸುವ ಶಕ್ತಿ ಯೋಗಕ್ಕಿದೆ. ವಿಶ್ವವನ್ನು ಒಂದುಗೂಡಿಸುವ ಶಕ್ತಿ ಯೋಗಕ್ಕಿದೆ ಎಂದರು.

ಕೋಟ್ಯಂತರ ಜನರು ಯೋಗ ದಿನಾಚರಣೆಯಲ್ಲಿ ಭಾಗಿಯಾದ್ದಾರೆ. ವಿಶ್ವ ಯೋಗ ದಿನಾಚರಣೆಗೆ 177 ದೇಶಗಳು ಸಹಯೋಗ ನೀಡಿವೆ. ಯೋಗ ದಿನಾಚರಣೆ ಶಾಂತಿ, ಪ್ರೇಮ, ಏಕತೆಯ ಪ್ರತೀಕ. ಮಿದುಳು, ಹೃದಯವನ್ನು ಯೋಗ ಒಗ್ಗೂಡಿಸುತ್ತದೆ.ಜಾತಿ, ಮತ, ಎಲ್ಲೆಗಳನ್ನು ಮೀರುವ ಶಕ್ತಿ ಯೋಗಕ್ಕಿದೆ. ಮುಂದಿನ ಉತ್ತಮ ಪೀಳಿಗೆಗಾಗಿ ಯೋಗ ಅತ್ಯಗತ್ಯ. ವ್ಯಕ್ತಿಯನ್ನು ಯೋಗ ಪರಿಪೂರ್ಣಗೊಳಿಸುತ್ತದೆ ಎಂದು ಪ್ರಧಾನಿ ನುಡಿದರು. 
 
ಯೋಗ ಜೀವನದ ಮಾರ್ಗದರ್ಶಿಯಾಗಿದೆ. ಯೋಗದಿಂದ ದಿನದ ಆರಂಭ ಉತ್ತಮವಾಗಿರುತ್ತದೆ ಎಂದು ಯೋಗಗುರು  ಬಾಬಾ ರಾಮದೇವ್ ಈ ಸಂದರ್ಭದಲ್ಲಿ ಹೇಳಿದರು. 
 

ವೆಬ್ದುನಿಯಾವನ್ನು ಓದಿ