ಹೊಸ ಪಕ್ಷ ಕಟ್ಟುವ ಸಂಕೇತ ನೀಡಿದ ಯಾದವ್, ಭೂಷಣ್

ಮಂಗಳವಾರ, 31 ಮಾರ್ಚ್ 2015 (13:11 IST)
ಅಪ್‌ನಿಂದ ಗಡಿಪಾರಾಗಿರುವ ಆಪ್‌ನ ಬಂಡಾಯ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್,   ಮತ್ತೊಂದು ರಾಜಕೀಯ ಪಕ್ಷವನ್ನು ಕಟ್ಟುವ ಸುಳಿವು ನೀಡಿದ್ದಾರೆ.
ತಮ್ಮ ರಾಜಕೀಯ ಜೀವನದಲ್ಲಿ ಹೊಸ ಹೆಜ್ಜೆ ಇಡುವ ದೃಷ್ಟಿಯಿಂದ ಇವರಿಬ್ಬರು ಏಪ್ರಿಲ್ 14, ಬಿ.ಆರ್.ಅಂಬೇಡ್ಕರ್ ಜನ್ಮದಿನದಂದು ತಮ್ಮ ಬೆಂಬಲಿಗರ ಜತೆ ರಾಷ್ಟ್ರೀಯ ಸಮಾಲೋಚನೆ ನಡೆಸಲಿದ್ದಾರೆ. ಸಭೆಯಲ್ಲಿ ಯಾದವ್, ಭೂಷಣ್ ಆಪ್ತರಾದ ಆಪ್ ಸದಸ್ಯರು, ಇತರ ಸಿವಿಲ್ ಸೊಸೈಟಿ ಮೂವ್‌ಮೆಂಟ್ ಸದಸ್ಯರು, ಎಎಪಿಯ ಮಾಜಿ ಆಂತರಿಕ ಲೋಕಪಾಲ ಅಡ್ಮಿರಲ್ ಎಲ್ ರಾಮದಾಸ್ ಮತ್ತು ನರ್ಮದಾ ಬಚಾವೊ ಆಂದೋಲನದ ಮೇಧಾ ಪಾಟ್ಕರ್ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿದು ಬಂದಿದೆ. 
 
ಆಮ್ ಆದ್ಮಿ ಪಕ್ಷದಿಂದ ಯಾದವ್ ಮತ್ತು ಭೂಷಣ್ ಅವರನ್ನು ವಜಾಗೊಳಿಸಿದ್ದಕ್ಕೆ ಅಸಮಾಧಾನಗೊಂಡ ಮೇಧಾ ಪಾಟ್ಕರ್ ಭಾನುವಾರ ಎಎಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
 
ಯಾದವ್ ಮತ್ತು ಪ್ರಶಾಂತ್ ಭೂಷಣ್ ಜೊತೆಗೆ ಆನಂದ್ ಕುಮಾರ್ ಮತ್ತು ಅಜಿತ್ ಝಾ ಅವರನ್ನು ಕೂಡ ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ರಾಷ್ಟ್ರೀಯ ಕಾರ್ಯಕಾರಣಿಯಿಂದ ಹೊರಹಾಕಲಾಗಿತ್ತು. 

ವೆಬ್ದುನಿಯಾವನ್ನು ಓದಿ