ಶಾಹಿ ಇಮಾಂರನ್ನು ಪಾಕಿಸ್ತಾನಕ್ಕೆ ಕಳಿಸಬೇಕು: ಯೋಗಿ ಆದಿತ್ಯನಾಥ್

ಶನಿವಾರ, 1 ನವೆಂಬರ್ 2014 (15:00 IST)
ಬಿಜೆಪಿ ಸಚಿವ ಮತ್ತು ಗೋರಖ್‌ಪುರದ ಲೋಕಸಭೆ ಸದಸ್ಯ ಯೋಗಿ ಆದಿತ್ಯನಾಥ್ ದೆಹಲಿ ಜುಮ್ಮಾ ಮಸೀದಿಯ ಶಾಹಿ ಇಮಾಮ್  ಕುರಿತಂತೆ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
 
ಶಾಹಿ ಇಮಾಮ್ ದೇಶದ್ರೋಹಿ ಎಂದು ಕರೆದ ಅವರು ಶಾಹಿ ಇಮಾಮ್  ಅವರನ್ನು ಪಾಕಿಸ್ತಾನಕ್ಕೆ ಕಳಿಸಬೇಕು ಎಂದು ವಾಗ್ದಾಳಿ ಮಾಡಿದರು. ಮಸೀದಿಯ ಉತ್ತರಾಧಿಕಾರಿಯಾಗಿ ತಮ್ಮ ಪುತ್ರನನ್ನು ನೇಮಕ ಮಾಡುವ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮಂತ್ರಣ ಕಳಿಸದೇ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರಿಗೆ ಆಮಂತ್ರಣ ನೀಡಿದ್ದರು.  ಮೋದಿ ರಾಷ್ಟ್ರದ ಮುಸ್ಲಿಮರ ಹೃದಯವನ್ನು ಗೆದ್ದಿಲ್ಲ ಎಂದು ಷಾಹಿ ಇಮಾಂ ಹೇಳಿದ್ದರು.
 
 
ಷಾಹಿ ಇಮಾಂ ಅವರು ಬಿಜೆಪಿ ನಾಯಕರಾದ ರಾಜನಾಥ್ ಸಿಂಗ್, ಹರ್ಷ ವರ್ಧನ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಆಹ್ವಾನವಿತ್ತಿದ್ದರು.

ವೆಬ್ದುನಿಯಾವನ್ನು ಓದಿ