ನಿಮ್ಮ ಕೈಯಲ್ಲಿ ಕಾನೂನು ತೆಗೆದುಕೊಳ್ಳಬೇಡಿ:ಗೋವು ರಕ್ಷಕರಿಗೆ ಯೋಗಿ ಆದಿತ್ಯ.ನಾಥ್

ಮಂಗಳವಾರ, 9 ಮೇ 2017 (20:28 IST)
ಗೋವು ರಕ್ಷಕರು ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳುವುದು ಬೇಡ. ಇಂತಹ ಅಪರಾಧಗಳನ್ನು ತಡೆಯಲು ಕಾನೂನಿನ ಸಹಾಯ ಪಡೆಯಿರಿ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋವು ರಕ್ಷಕರಿಗೆ ಕರೆ ನೀಡಿದ್ದಾರೆ. 
 
ಗೋವು ರಕ್ಷಣೆ ಕುರಿತಂತೆ ಸಮಸ್ಯೆಗಳು ಎದುರಾದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
 
ನಿಮ್ಮ ಸುತ್ತಮುತ್ತಲು ಕಾನೂನುಬಾಹಿರ ಕೃತ್ಯಗಳು ನಡೆದಲ್ಲಿ ಪೊಲೀಸರಿಗೆ ತಿಳಿಸಿ. ಅವರು ಕಾರ್ಯಾಚರಣೆ ನಡೆಸಲಿ. ನೀವು ಕಾನೂನು ಕೈಗೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ರಾಜ್ಯದಲ್ಲಿ ಕಸಾಯಿಖಾನೆಗಳಿದ್ದಲ್ಲಿ ಅವುಗಳನ್ನು ಮುಚ್ಚುವುದು ಪೊಲೀಸರ ಕರ್ತವ್ಯವಾಗಿದೆ ಎಂದರು. 
 
ಯುವತಿಯರ ಸುರಕ್ಷತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಒಂದು ವೇಳೆ ಸಮಸ್ಯೆಗಳು ಎದುರಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
 
ಅಳ್ವಾರ್ ಜಿಲ್ಲೆಯಲ್ಲಿ ಗೋವುಗಳನ್ನು ಕಸಾಯಿ ಖಾನೆಗೆ ರವಾನಿಸಲಾಗುತ್ತಿದೆ ಎಂದು ಭಾವಿಸಿ ಗೋವು ರಕ್ಷಕರು ಮುಸ್ಲಿಂ ಸಮುದಾಯದ ಪೆಹಲು ಖಾನ್ ಎಂಬಾತನ ಮೇಲೆ ಹಲ್ಲೆ ಮಾಡಿ ಹತ್ಯೆಗೈಯಲಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ