ಚಿಂತಿಸದಿರಿ, ಸರ್ಕಾರ ರಾಮ ಸೇತುವನ್ನು ಸ್ಪರ್ಶಸಿದರೆ ನಮ್ಮಲ್ಲಿಗೆ ಬನ್ನಿ: ಸ್ವಾಮಿಗೆ ಸುಪ್ರೀಂ

ಗುರುವಾರ, 4 ಫೆಬ್ರವರಿ 2016 (16:32 IST)
ರಾಮ ಸೇತುವೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಕೇಂದ್ರ ಸರ್ಕಾರ ಸ್ಪಷ್ಟೀಕರಣ ಕೋರಿ ಬಯಸಿ ತುರ್ತು ವಿಚಾರಣೆ ನಡೆಸುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ. 

ಪ್ರಕರಣವನ್ನು ಕೈಗೆತ್ತಿಕೊಂಡ ಅಪೆಕ್ಸ್ ಕೋರ್ಟ್ ಈ ಕುರಿತು ಚಿಂತಿಸದಿರಿ. ಸರ್ಕಾರ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟ ಪಡಿಸಿದೆ. ಒಂದು ವೇಳೆ ಸರ್ಕಾರ ಪ್ರಾಚೀನ ರಚನೆಯನ್ನು ಸ್ಪರ್ಶಿಸಿದರೆ ತಮ್ಮಲ್ಲಿಗೆ ಬನ್ನಿ ಎಂದು ಹೇಳಿದೆ. 
 
2014ರಲ್ಲಿ ಲೋಕಸಭೆಯಲ್ಲಿ ಮಾತನಾಡುತ್ತ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನಾವು ರಾಮಸೇತುವನ್ನು ಒಡೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದರು. 
 
ಹಿಂದೂ ಧರ್ಮದ ಪ್ರಕಾರ ರಾವಣನಿಂದ ಅಪಹೃತಳಾಗಿದ್ದ ಸೀತಾಮಾತೆಯನ್ನು ಮರಳಿ ತರಲು ಹೊರಟಿದ್ದ ಶ್ರೀರಾಮ ಸೇನೆಯಲ್ಲಿದ್ದ ವಾನರರು ಭಾರತದ ತುದಿಯಿಂದ ಶ್ರೀಲಂಕಾಕ್ಕೆ ಸಂಪರ್ಕ ಕಲ್ಪಿಸಲು ಕಲ್ಲಿನಿಂದ ರಾಮಸೇತುವನ್ನು ನಿರ್ಮಿಸಿದ್ದರು. 
 

ವೆಬ್ದುನಿಯಾವನ್ನು ಓದಿ