ನೀವು ಸರಿಯಾದ ದಿಕ್ಕಿನಲ್ಲಿ ಸಾಗಿದ್ದಿರಿ, ನಾವು ಪ್ರಭಾವಿತರಾಗಿದ್ದೇವೆ: ಮೋದಿಗೆ ಆರೆಸ್ಸೆಸ್

ಶನಿವಾರ, 5 ಸೆಪ್ಟಂಬರ್ 2015 (16:09 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ 14 ತಿಂಗಳ ಅಡಳಿತದಿಂದ ಆರೆಸ್ಸೆಸ್ ಪ್ರಭಾವಿತವಾಗಿದ್ದು, ನೀವು ಸರಿಯಾದ ದಿಕ್ಕಿನಲ್ಲಿ ಸಾಗಿದ್ದಿರಿ ಎಂದು ತೃಪ್ತಿ ವ್ಯಕ್ತಪಡಿಸಿದೆ.
 
ಕೇಂದ್ರ ಸರಕಾರ ಸಾಗುತ್ತಿರುವ ದಾರಿ ಸೂಕ್ತವಾಗಿದ್ದು, ಸರಕಾರ ಎಲ್ಲಾ ವಿಷಯಗಳಲ್ಲಿ ಶೇ,100 ಸಾಧನೆಗಳನ್ನು ಮಾಡದಿದ್ದರೂ ತೃಪ್ತಿ ತಂದಿದೆ ಸರಕಾರ ಕೇವಲ 14 ತಿಂಗಳದ್ದಾಗಿದ್ದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಾಧನೆಗಳನ್ನು ನಿರೀಕ್ಷಿಸಬಹುದಾಗಿದೆ ಎಂದು ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ. 
 
ಭಾರತ-ಪಾಕಿಸ್ತಾನ ದೇಶಗಳು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ಯಾವ ರೀತಿ ಬಾಂದವ್ಯ ವೃದ್ಧಿಸಬೇಕು ಎನ್ನುವತ್ತ ಗಮನಹರಿಸಬೇಕು. ಮಾತುಕತೆ ಮತ್ತು ಭಯೋತ್ಪಾದನೆ ಒಂದೇ ಹಂತದಲ್ಲಿ ಸಾಗಲು ಸಾಧ್ಯವಿಲ್ಲ ಎನ್ನುವ ಹೇಳಿಕೆಗೆ ಆರೆಸ್ಸೆಸ್ ಬದ್ಧವಾಗಿದೆ ಎಂದರು.  
 
ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಘ ಪರಿವಾರದ ನಾಯಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ಬೃಹತ್ ಬದಲಾವಣೆ ತರಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಸಂಘ ಪರಿವಾರದ ಬೆಂಬಲ ಅಗತ್ಯವಾಗಿದೆ. ಆರೆಸ್ಸೆಸ್ ಹಿನ್ನೆಲೆಯಿಂದ ಬಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
 
ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಈ ಮೊದಲು ಭಾರತದ ಭಾಗವಾಗಿದ್ದು. ಭಿನ್ನಾಭಿಪ್ರಾಯಗಳನ್ನು ಮರೆತು ಬಾಂದವ್ಯ ವೃದ್ಧಿಸುವುದು ಅಗತ್ಯವಾಗಿದೆ ಎಂದು ಹೊಸಬಾಳೆ ಅಭಿಪ್ರಾಯಪಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ