ಯುವಕನ ಆಕ್ರೋಶಕ್ಕೆ ನಿಂತಲ್ಲೇ ಬೆವೆತ ಸಚಿವರು

ಶನಿವಾರ, 6 ಫೆಬ್ರವರಿ 2016 (10:56 IST)
ಉಪಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಬ್ಬರದ ಪ್ರಚಾರ ಮಾಡುತ್ತಿವೆ. ಆದರೆ ಮತಯಾಚನೆಗೆ ತೆರಳುವ ಎಲ್ಲ ಪಕ್ಷದವರು ಜನರಿಂದ ಆಕ್ರೋಶವನ್ನು ಎದುರಿಸುವಂತಾಗಿದೆ.

ನಿನ್ನೆ ದೇವದುರ್ಗ ತಾಲ್ಲೂಕಿನ ಕೊಪ್ಪಳ ಗ್ರಾಮಕ್ಕೆ ಪಕ್ಷದ ಅಭ್ಯರ್ಥಿ ರಾಜಶೇಖರ್ ನಾಯಕ್ ಅವರಿಗಾಗಿ ಮತಯಾಚಿಸಲು ಹೋಗಿದ್ದ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರಂತೂ ನಿನ್ನೆ ಅಗ್ನಿಪರೀಕ್ಷೆಯನ್ನೇ ಎದುರಿಸಬೇಕಾಯಿತು. ತಮ್ಮ ಜಿಲ್ಲೆಗೆ ಐಐಟಿ ಕೈ ತಪ್ಪಿದ್ದನ್ನಿಟ್ಟುಕೊಂಡ ಯುವಕನೋರ್ವ ಸಚಿವರನ್ನು ನೂರಾರು ಜನರ ಸಮ್ಮುಖದಲ್ಲಿ ಬಾಯಿಗೆ ಬಂದಂತೆ ನಿಂದಿಸಿದ್ದಾನೆ. 
 
ಅದು ಕೇಂದ್ರದ ಜವಾಬ್ದಾರಿ ಎಂದು ಯುವಕನಿಗೆ ಸಮಜಾಯಿಸಿ ಕೊಡಲೆತ್ನಿಸಿದ ಸಚಿವರ ಮಾತಿಗೆ ಕೇಂದ್ರಕ್ಕೂ ನಾವು ನಾಯಕರನ್ನು ಆಯ್ಕೆ ಮಾಡಿ ಕಳುಹಿಸುತ್ತೀವಿ ಹಾಗಾದರೆ ಅವರನ್ನು ನಾವು ಯಾಕೆ ಆಯ್ಕೆ ಮಾಡುವುದು ಎಂದ ಯುವಕ ಸಚಿವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾನೆ. ಆತನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಚಿವರು ನಿಂತಲ್ಲಿಯೇ ಬೆವರಿದ್ದು ಕಂಡು ಬಂತು. 

ವೆಬ್ದುನಿಯಾವನ್ನು ಓದಿ