ಹದಿಹರೆಯದ ಯುವತಿಯ ಅಶ್ಲೀಲ ಭಾವಚಿತ್ರಗಳನ್ನು ಪೋಸ್ಟ್ ಮಾಡಿದ ಯುವಕನ ಬಂಧನ

ಶುಕ್ರವಾರ, 22 ಆಗಸ್ಟ್ 2014 (15:50 IST)
ತಾನು ಇಷ್ಟಪಟ್ಟಿದ್ದ ಯುವತಿಯ ಜತೆಗಿನ ವಿವಾಹವನ್ನು, ಕೆಲ ವಿವಾದದ ಕಾರಣಗಳಿಂದಾಗಿ ಆಕೆಯ ಕುಟುಂಬದವರೇ ತಿರಸ್ಕರಿಸಿದ ಕಾರಣಕ್ಕೆ ವಿಚಲಿತನಾದ ಯುವಕನೊಬ್ಬ ಸಾಮಾಜಿಕ ಜಾಲತಾಣವೊಂದರಲ್ಲಿ ಆಕೆಯ ಅಶ್ಲೀಲ ಭಾವಚಿತ್ರಗಳನ್ನು ಪೋಸ್ಟ್ ಮಾಡಿದ ಘಟನೆ ನಿಜಾಮಾಬಾದ್ ಜಿಲ್ಲೆಯಲ್ಲಿ ವರದಿಯಾಗಿದೆ.

ಆರೋಪಿಯನ್ನು ಬಿ ಸುನೀಲ್ ರೆಡ್ಡಿ ಎಂದು ಗುರುತಿಸಲಾಗಿದ್ದು, ಆತ ಪೋಲಿಸರಿಂದ ಬಂಧಿಸಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ. 
 
ಜಿಲ್ಲೆಯ ಭೀಕನೂರ್ ಮಂಡಲದ ವಾಸಿಯಾಗಿರುವ 12 ನೇ ತರಗತಿ ಓದುತ್ತಿರುವ 17 ವರ್ಷದ ಹುಡುಗಿಯ ಜತೆ ರೆಡ್ಡಿಯ ಮದುವೆ ನಿಶ್ಚಯವಾಗಿತ್ತು. ಆದರೆ ಕೆಲ ಕಾರಣಕ್ಕೆ ಅತೃಪ್ತಗೊಂಡ ಆಕೆಯ ಕುಟುಂಬದವರು ನಿಗದಿಯಾಗಿದ್ದ ಅವರಿಬ್ಬರ ಮದುವೆಗೆ ತಡೆಯೊಡ್ಡಿದರು. ಅದರಿಂದ ಕುಪಿತನಾದ ಆತ ಅಪ್ರಾಪ್ತೆಯ ಅಶ್ಲೀಲ ಭಂಗಿಯ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಎಂದು ಕಾಮರೆಡ್ಡಿ ಗ್ರಾಮೀಣ ವೃತ್ತ ನಿರೀಕ್ಷಕ ಸುಭಾಶ್ಚಂದ್ರ ಬೋಸ್ ಹೇಳಿದ್ದಾರೆ. 
 
ಆಕೆಯ ಫೋಟೋ ಆಲ್ಬಂನಿಂದ ಕೆಲವೊಂದು ಪೋಟೋಗಳನ್ನು ಎತ್ತಿಕೊಂಡ ರೆಡ್ಡಿ, ಅಶ್ಲೀಲ ಭಾವಚಿತ್ರಗಳ ಜತೆ  ಅವುಗಳನ್ನು ಜೋಡಿಸಿ  ವೈಬ್‌ಸೈಟ್‌ಗಳನ್ನು ಪ್ರಕಟಿಸಿದ್ದಾನೆ ಎಂದು ಹೇಳಿದ್ದಾರೆ. 
 
ಪೀಡಿತಳ ತಂದೆ ಮತ್ತು ಆಕೆಯ ಸ್ನೇಹಿತರು ಇದನ್ನು ನೋಡಿದರು ಮತ್ತು ಪೋಲಿಸರಲ್ಲಿ ದೂರು ದಾಖಲಿಸಿದರು. ಆರೋಪಿಯ ಮೇಲೆ ನಿರ್ಭಯಾ ಕಾಯ್ದೆ ಮತ್ತು ಐಟಿ ಕಾಯಿದೆಯನ್ವಯ  ಪ್ರಕರಣ ದಾಖಲಿಸಲಾಗಿದ್ದು ಕಳೆದ ಸಾಯಂಕಾಲ ಅರೋಪಿಯನ್ನು ಬಂಧಿಸಲಾಗಿದೆ ಎಂದು ಕಾಮರೆಡ್ಡಿ ಗ್ರಾಮೀಣ ವೃತ್ತ ನಿರೀಕ್ಷಕ ಸುಭಾಶ್ಚಂದ್ರ ಬೋಸ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ