ಕೇರಳ: ಪ್ರೀತಿ ಸ್ವಾತಂತ್ರ್ಯದ ಅಭಿವ್ಯಕ್ತಿಗೆ ಕಿಸ್ಸಿಂಗ್ ಡೇ

ಗುರುವಾರ, 30 ಅಕ್ಟೋಬರ್ 2014 (09:49 IST)
ಅಮ್ಮನದಿನ, ಅಪ್ಪನ ದಿನ, ಪ್ರೇಮಿಗಳ ದಿನಗಳ ಆಚರಣೆಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈಗ ಅದರ ಸಾಲಿಗೆ ಹೊಸದೊಂದು ಸೇರ್ಪಡೆಯಾಗಿದೆ. ಅದು ಕಿಸ್ಸಿಂಗ್ ಡೇ....

ಬರುವ ಭಾನುವಾರ, ನವೆಂಬರ್ 2 ರಂದು ಕೇರಳ ಕೊಚ್ಚಿಯಲ್ಲಿ 'ಚುಂಬನದ ದಿನ' ಹೆಸರಿನ ವಿನೂತನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. 'ಎ ಕಿಸ್ ಆಫ್ ಲವ್ ಡೇ 'ಎಂಬುದು ಇದರ ವಿಸ್ತ್ರತ ರೂಪ. ನೈತಿಕ ಪೊಲೀಸ್‌ಗಿರಿಯನ್ನು ವಿರೋಧಿಸಿ ಮತ್ತು ಪ್ರೀತಿ ಸ್ವಾತಂತ್ರ್ಯವನ್ನು ಅಭಿವ್ಯಕ್ತ ಪಡಿಸಲು ಕಿರು ಚಿತ್ರ ನಿರ್ಮಾಪಕ ರಾಹುಲ್ ಪಶುಪಾಲನ್ ನೇತೃತ್ವದ 'ಫ್ರೀ ಥಿಂಕರ್ಸ್' ಎಂಬ ಸಂಘಟನೆ ಈ ಧರಣಿಗೆ ಕರೆ ನೀಡಿದೆ.
 
ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ  ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಕರೆಗೆ 10, 000 ಕ್ಕೂ ಹೆಚ್ಚು ಜನರು ಬೆಂಬಲ ವ್ಯಕ್ತ ಪಡಿಸಿದ್ದಾರೆ. 
 
ಮುತ್ತಿಕ್ಕುವ ಪ್ರತಿಭಟನೆಯಲ್ಲಿ ಸುಮಾರು 200 ಕ್ಕೂ ಹೆಚ್ಚು ಮಂದಿ ಭಾಗವಹಿಸಬಹುದೆಂದು ಅಂದಾಜಿಸಲಾಗಿದೆ.
 
ಈ ಚುಂಬನ ಪ್ರತಿಭಟನೆಗೆ ವಿವಿಧ ಹಿಂದೂ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ