ಗುಜರಾತ್ ಭಾರತದ ಭಾಗವಲ್ಲವೇ?: ಕೇಂದ್ರ ಸರಕಾರದ ವಿರುದ್ಧ ಸುಪ್ರೀಂಕೋರ್ಟ್ ಕಿಡಿ

ಸೋಮವಾರ, 1 ಫೆಬ್ರವರಿ 2016 (16:42 IST)
ಸಂಸತ್ತಿನಲ್ಲಿ ಅಂಗೀಕಾರಗೊಂಡ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸದಿರುವ ಗುಜರಾತ್ ಸರಕಾರದ ವಿರುದ್ಧ ಕಿಡಿಕಾರಿದ ಸುಪ್ರೀಂಕೋರ್ಟ್, ಗುಜರಾತ್ ಭಾರತದ ಭಾಗವಲ್ಲವೇ ಎಂದು ಪ್ರಶ್ನಿಸಿದೆ.
 
ಸಂಸತ್ತು ಏನು ಮಾಡುತ್ತಿದೆ? ಗುಜರಾತ್ ದೇಶದ ಭಾಗವಲ್ಲವೇ?ಸಂಪೂರ್ಣ ಭಾರತದಾದ್ಯಂತ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಬೇಕು ಎನ್ನುವ ಕಾಯ್ದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರೆತಿದೆ. ಗುಜರಾತ್ ಸರಕಾರ ಕಾಯ್ದೆ ಜಾರಿಗೊಳಿಸಿಲ್ಲ. ನಾಳೆ ಇತರ ರಾಜ್ಯಗಳು ಸಿಆರ್‌ಪಿಸಿ, ಐಪಿಸಿ ಮತ್ತು ಸಾಕ್ಷ್ಯಾಧಾರ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದಲ್ಲಿ ಸಂಸತ್ತು ಮೌನವಾಗಿರುತ್ತದೆಯೇ ಎಂದು ನ್ಯಾಯಮೂರ್ತಿ ಮದನ್ ಬಿ.ಲೋಕುರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಗುಜರಾತ್ ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಎಂಜಿಎನ್‌ಆರ್‌ಇಜಿಎ, ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಮತ್ತು ಮಧ್ಯಾಹ್ನದೂಟ ಯೋಜನೆಗಳ ಜಾರಿ ಕುರಿತಂತೆ ಸಂಪೂರ್ಣ ವರದಿ ನೀಡಿ ಎಂದು ಕೋರ್ಟ್ ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿದೆ. 
 
ಮುಂಬರುವ ಫೆಬ್ರವರಿ 10 ರೊಳಗೆ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಬೇಕು. ಎರಡು ದಿನಗಳ ನಂತರ ವಿಚಾರಣೆ ಆರಂಭಿಸಲಾಗುವುದು ಎಂದು ಕೋರ್ಟ್ ಆದೇಶ ನೀಡಿದೆ. 

ವೆಬ್ದುನಿಯಾವನ್ನು ಓದಿ