ಮೋದಿ ಚುನಾವಣೆ ಸಭೆಗಳ ನಿಜ ವೆಚ್ಚ ಬಹಿರಂಗಪಡಿಸಲಿ: ಆಮ್ ಆದ್ಮಿ ಸವಾಲ್

ಶುಕ್ರವಾರ, 14 ಮಾರ್ಚ್ 2014 (15:39 IST)
PR
ಬಿಜೆಪಿ ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿಯ ಮೇಲೆ ವಾಗ್ದಾಳಿಯನ್ನು ಮುಂದುವರೆಸಿರುವ ಆಪ್ ಪಕ್ಷದ ನಾಯಕ ಸಂಜಯ್ ಸಿಂಗ್, ಮೋದಿ ತನ್ನ ಚುನಾವಣಾ ಸಚುನಾವಣೆ ಸಭೆಗಳ ನಿಜ ವೆಚ್ಚ ಬಹಿರಂಗಪಡಿಸಲಿ ಎಂದು ಸವಾಲ್ ಹಾಕಿದ್ದಾರೆ.

ನರೇಂದ್ರ ಮೋದಿಯ ಪ್ರತಿ ಸಭೆಗೂ ಸುಮಾರು ರೂ 50-55 ಕೋಟಿ ಖರ್ಚಾಗುತ್ತದೆ. ಫಲಕ, ವೇದಿಕೆ, ಪ್ರಯಾಣ ಮತ್ತು ಸಭೆಗಳಿಗೆ ಬರುವ ಜನರಿಗೆ ಪಾವತಿಸಲು ತುಂಬಾ ಹಣ ಸುರಿಯಲಾಗುತ್ತಿದೆ. ಬಿಜೆಪಿ ಖರ್ಚಿನಲ್ಲಿ ಹೆಚ್ಚು ಪಾರದರ್ಶಕತೆ ತೋರಿಸಬೇಕು ಮತ್ತು ಎಲ್ಲಿಂದ ಹಣ ಬರುತ್ತದೆ ಎಂಬುದನ್ನು ಸ್ಪಷ್ಟಸಡಿಸಬೇಕು ಸಿಂಗ್ ಹೇಳಿದರು.

" ಮೋದಿ ಆಷಾಢಭೂತಿತನ ತೋರಿಸುತ್ತಿದ್ದಾರೆ " ಎಂದಿರುವ ಸಿಂಗ್, "ಬಿಜೆಪಿ ನಾಯಕ ರಾಜವಂಶೀಯ ರಾಜಕೀಯದ ವಿರೋಧಿ, ಆದ್ದರಿಂದ ಅವರು ಸೋನಿಯಾ ಅಥವಾ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಬೇಕು. ನಿಜವಾಗಿಯೂ ಅವರು ರಾಜವಂಶೀಯ ರಾಜಕೀಯದ ವಿರೋಧಿಯಾಗಿದ್ದರೆ, ಏಕೆ ಸೋನಿಯಾ ಅಥವಾ ರಾಹುಲ್ ವಿರುದ್ಧ ಸ್ಪರ್ಧಿಸುವುದಿಲ್ಲ " ಎಂದು ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ವಿರುದ್ಧ ಯಾರು ಸ್ಪರ್ಧಿಸುತ್ತಿದ್ದಾರೆ ಎಂದು ಕೇಳಿದಾಗ ಪ್ರಬಲ ಅಭ್ಯರ್ಥಿಯೊಬ್ಬರು ಅವರ ವಿರುದ್ಧ ಸ್ಪರ್ಧಿಸುತ್ತಾರೆ. ಮೋದಿ ತನ್ನ ಉಮೇದುವಾರಿಕೆಯನ್ನು ಘೋಷಿಸುವುದನ್ನು ಕಾಯುತ್ತಿದ್ದೇವೆ. ತಕ್ಷಣ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ