ಸೆನ್ಸೆಕ್ಸ್: ಪಾತಾಳಕ್ಕೆ ಕುಸಿದ ಸಂವೇದಿ ಸೂಚ್ಯಂಕ

ಮಂಗಳವಾರ, 3 ಸೆಪ್ಟಂಬರ್ 2013 (12:47 IST)
PTI
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ ದುರ್ಬಲವಾಗಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದೆ.

ಶೇರುಪೇಟೆಯ ವಹಿವಾಟು ಆರಂಭವಾಗುತ್ತಿದ್ದಂತೆ ಚೇತರಿಕೆ ಕಂಡಿದ್ದ ಸೂಚ್ಯಂಕ ನಂತರ ಕೆಲವೇ ನಿಮಿಷಗಳಲ್ಲಿ 228 ಪಾಯಿಂಟ್‌ಗಳ ಕುಸಿತ ಕಂಡು 18,658.13 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 80.50 ಪಾಯಿಂಟ್‌ಗಳ ಕುಸಿತ ಕಂಡು 5470.25 ಅಂಕಗಳಿಗೆ ತಲುಪಿದೆ.

ಹೀರೋ ಮೋಟಾರ್ ಕಾರ್ಪೋರೇಶನ್, ಎಚ್‌ಡಿಎಫ್‌ಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಸಿಐಸಿಐ ಬ್ಯಾಂಕ್ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.

ಏತನ್ಮಧ್ಯೆ, ಬಿಎಚ್‌ಇಎಲ್, ಟಾಟಾ ಮೋಟಾರ್ಸ್, ಒಎನ್‌ಜಿಸಿ, ಕೋಲ್ ಇಂಡಿಯಾ, ಜಿಂದಾಲ್ ಸ್ಟೀಲ್ ಮತ್ತು ಟಾಟಾ ಸ್ಟೀಲ್ ಕಂಪೆನಿಗಳ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ಚೀನಾ, ಹಾಂಗ್‌ಕಾಂಗ್, ದಕ್ಷಣ ಕೊರಿಯಾ, ಜಪಾನ್, ಇಂಡೋನೇಷ್ಯಾ ಮತ್ತು ತೈವಾನ್ ಶೇರುಪೇಟೆಗಳು ಶೇ.0.46 ರಿಂದ ಶೇ.2.58ರವರೆಗೆ ಚೇತರಿಕೆ ಕಂಡಿವೆ.

ವೆಬ್ದುನಿಯಾವನ್ನು ಓದಿ