ಆರಂಭಿಕ ವಹಿವಾಟಿನಲ್ಲಿ ಮಾರುಕಟ್ಟೆ ಏರಿಕೆ

ಮಂಗಳವಾರ, 28 ಫೆಬ್ರವರಿ 2012 (10:41 IST)
ಹೂಡಿಕೆದಾರರು ಶೇರುಗಳ ಖರೀದಿ ಭರಾಟೆಯಲ್ಲಿ ತೊಡಗಿದ್ದರ ಹಿನ್ನಲೆಯಲ್ಲಿ ದಿನದ ಆರಂಭಿಕ ವಹಿವಾಟಿನಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕವು ಶೇಕಡಾ 1ರಷ್ಟು ಏರಿಕೆಯನ್ನು ಕಂಡಿವೆ.

ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ 977ಕ್ಕೂ ಹೆಚ್ಚು ಕುಸಿತ ಕಂಡಿದ್ದ ಸಂವೇದಿ ಸೂಚ್ಯಂಕವು ಇಂದಿನ ದಿನದಲ್ಲಿ ಮತ್ತೆ ಪುಟಿದೇಳುವ ಪ್ರದರ್ಶನ ನೀಡಿದೆ. ಇದರಂತೆ ಆರಂಭಿಕ ವಹಿವಾಟಿನಲ್ಲಿ 174.27 ಪಾಯಿಂಟ್ ಏರಿಕೆ ಕಾಣುವ ಮೂಲಕ 17620.02 ಅಂಶಗಳಿಗೆ ತಲುಪಿದೆ.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ 43.25 ಪಾಯಿಂಟ್ ಅಥವಾ 0.82ರಷ್ಟು ಕುಸಿತ ಕಂಡು 5324.45 ಅಂಶಗಳಗೆ ತಲುಪಿದೆ.

ವೆಬ್ದುನಿಯಾವನ್ನು ಓದಿ