ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 269 ಪಾಯಿಂಟ್ ಏರಿಕೆ

ಬುಧವಾರ, 29 ಫೆಬ್ರವರಿ 2012 (11:04 IST)
ಹೂಡಿಕೆದಾರರು ಶೇರುಗಳ ಖರೀದಿ ಭರಾಟೆಯಲ್ಲಿ ತೊಡಗಿದ್ದರ ಹಿನ್ನಲೆಯಲ್ಲಿ ದಿನದ ವಹಿವಾಟಿನಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕವು ಸತತ ಎರಡನೇ ದಿನದಲ್ಲೂ ಏರಿಕೆಯನ್ನು ಕಂಡಿದೆ.

ಬುಧವಾರದ ಆರಂಭಿಕ ವಹಿವಾಟಿನಲ್ಲಿ 269 ಪಾಯಿಂಟ್ ಏರಿಕೆ ಕಂಡಿರುವ ಸಂವೇದಿ ಸೂಚ್ಯಂಕವು 18 ಸಾವಿರ ಅಂಶಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ದಿನದ ವಹಿವಾಟಿನಲ್ಲೂ ಸೂಚ್ಯಂಕ 185.37 ಪಾಯಿಂಟ್ ಏರಿಕೆ ಕಂಡಿತ್ತು.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ 81.25 ಪಾಯಿಂಟ್ ಅಥವಾ ಶೇಕಡಾ 1.51ರಷ್ಟು ಏರಿಕೆ ಕಂಡು 5456.75 ಅಂಶಗಳಿಗೆ ತಲುಪಿದೆ. ಬಂಡವಾಳ ಸರಕು ಸೇರಿದಂತೆ ಬಹುತೇಕ ಎಲ್ಲ ಶೇರುಗಳು ಧನಾತ್ಮಕ ಗತಿಯಲ್ಲಿ ಸಾಗುತ್ತಿವೆ.

ವೆಬ್ದುನಿಯಾವನ್ನು ಓದಿ