ತೈಲ ಬೆಲೆ ಹೆಚ್ಚಳ; ಮಾರುಕಟ್ಟೆ ದೊಪ್ಪನೆ ಕುಸಿತ

ಸೋಮವಾರ, 27 ಫೆಬ್ರವರಿ 2012 (17:35 IST)
ಜಾಗತಿಕ ವಲಯಗಳಲ್ಲಿ ತೈಲ ಬೆಲೆ ಏರಿಕೆ ಭಾರಿ ಏರಿಕೆ ಕಂಡಿದ್ದರ ಹಿನ್ನಲೆಯಲ್ಲಿ ದಿನದ ವಹಿವಾಟಿನಲ್ಲಿ ಭಾರಿ ಕುಸಿತ ಅನುಭವಿಸಿರುವ ಮುಂಬೈನ ಬಿಎಸ್‌ಇ ಸೂಚ್ಯಂಕವು ಶೇಕಡಾ 2.67ರಷ್ಟು ಕುಸಿತವನ್ನು ಕಂಡಿದೆ.

ದಿನದ ವಹಿವಾಟಿನಲ್ಲಿ 477.82 ಪಾಯಿಂಟ್ ಕುಸಿತ ಕಂಡಿರುವ ದೇಶಿಯ ಮಾರುಕಟ್ಟೆಯು 17445.75 ಅಂಶಗಳಿಗೆ ತಲುಪಿದೆ. ಹೂಡಿಕೆದಾರರು ಲಾಂಭಾಂಶ ಕಾಯ್ದಿರಿಸುವಿಕೆಯ ತಂತ್ರಕ್ಕೆ ಮುಂದಾಗಿರುವುದು ಸೆನ್ಸೆಕ್ಸ್ ಹಿನ್ನಡೆಗೆ ಕಾರಣವಾಗಿದೆ.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ 148.10 ಪಾಯಿಂಟ್ ಅಥವಾ ಶೇಕಡಾ 2.73ರಷ್ಟು ಕುಸಿತ ಕಂಡು 1281.20 ಅಂಶಗಳಿಗೆ ಇಳಿಕೆ ಕಂಡಿವೆ.

ವೆಬ್ದುನಿಯಾವನ್ನು ಓದಿ