ದುರ್ಬಲ ವಹಿವಾಟು: ಅಲ್ಪ ಕುಸಿತ ಕಂಡ ಶೇರುಪೇಟೆ ಸೂಚ್ಯಂಕ

ಗುರುವಾರ, 29 ಮಾರ್ಚ್ 2012 (18:16 IST)
PTI
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 63 ಪಾಯಿಂಟ್‌ಗಳ ಕುಸಿತ ಕಂಡಿದೆ.

ಶೇರುಪೇಟೆಯ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 17 ಸಾವಿರಕ್ಕಿಂತ ಕೆಳಗೆ ಕುಸಿದಿತ್ತು. ಆದರೆ, ನಂತರ ಚೇತರಿಕೆ ಕಂಡು ವಹಿವಾಟಿನ ಮುಕ್ತಾಯಕ್ಕೆ 63.01 ಪಾಯಿಂಟ್‌ಗಳ ಇಳಿಕೆ ಕಂಡು 17,058.61 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 15.90 ಪಾಯಿಂಟ್‌ಗಳ ಕುಸಿತ ಕಂಡು 5,176.85 ಅಂಕಗಳಿಗೆ ತಲುಪಿದೆ.

ಬಂಡವಾಳ ವಸ್ತುಗಳು, ಟೆಕ್ ಸೂಚ್ಯಂಕ, ಐಟಿ ಸೂಚ್ಯಂಕ, ಎಫ್‌ಎಂಸಿಜಿ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.

ಎಸ್‌ಬಿಐ, ಲಾರ್ಸೆನ್ ಆಂಡ್ ಟೌಬ್ರೋ, ಭಾರ್ತಿ ಏರ್‌ಟೆಲ್, ಬಿಎಚ್‌ಇಎಲ್, ಎಂ ಆಂಡ್ ಎಂ, ಟಾಟಾ ಸ್ಟೀಲ್, ಸಿಪ್ಲಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.

ವೆಬ್ದುನಿಯಾವನ್ನು ಓದಿ