ನಾಲ್ಕು ದಿನಗಳ ಏರಿಕೆಗೆ ಬ್ರೇಕ್; ಸೂಚ್ಯಂಕ ಕುಸಿತ

ಸೋಮವಾರ, 31 ಅಕ್ಟೋಬರ್ 2011 (17:17 IST)
ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಏರುಗತಿಯನ್ನು ಕಾಯ್ದುಕೊಂಡಿದ್ದ ಮುಂಬೈನ ಬಿಎಸ್‌ಇ ಸೂಚ್ಯಂಕ ಕೊನೆಗೂ ಹೂಡಿಕೆದಾರರು ಲಾಂಭಾಂಶ ಕಾಯ್ದಿರಿಸುವಿಕೆಯ ತಂತ್ರ ಅನುಸರಿಸಿರುವ ಹಿನ್ನಲೆಯಲ್ಲಿ ದಿನದ ವಹಿವಾಟಿನಲ್ಲಿ ಕುಸಿತವನ್ನು ಅನುಭವಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸೋಮವಾರದ ವಹಿವಾಟಿನಲ್ಲಿ ಭರ್ತಿ 100 ಅಂಕ ಕುಸಿತ ಕಂಡಿರುವ ಸಂವೇದಿ ಸೂಚ್ಯಂಕವು 17,705.01 ಅಂಶಕ್ಕೆ ಇಳಿಕೆ ಕಂಡಿದೆ. ವಹಿವಾಟಿನ ಅವಧಿಯೊಂದರಲ್ಲಿ ಸೂಚ್ಯಂಕವು ಗರಿಷ್ಠ 17,813.11 ಅಂಶಗಳ ವರೆಗೆ ತಲುಪಿತ್ತು.

ಮಾರುಕಟ್ಟೆಯು ಕೊನೆಯ ನಾಲ್ಕು ದಿನಗಳ ಅವಧಿಯಲ್ಲಿ 1,016 ಪಾಯಿಂಟುಗಳಷ್ಟು ಏರಿಕೆಯನ್ನು ಕಂಡಿತ್ತು. ಆದರೆ ಬಡ್ಡಿದರ ಏರಿಕೆ ಭೀತಿಯು ತೈಲ ಹಾಗೂ ಗ್ಯಾಸ್ ಬೇಡಿಕೆಗಳನ್ನು ಕುಂಠಿತಗೊಳಿಸಲಿದೆ ಎಂಬ ಆಂತಕವು ಆಟೋ ಕ್ಷೇತ್ರದ ಹೂಡಿಕೆದಾರರನ್ನು ಕಾಡಿದ್ದರೆ ಬೆಳವಣಿಗೆ ಕಾಳಜಿಯು ಉಕ್ಕು ವಿಭಾಗದ ಶೇರುಗಳನ್ನು ಹಿನ್ನಡೆಗೆ ತಳ್ಳುವಂತಾಗಿತ್ತು.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ 34.10 ಪಾಯಿಂಟ್ ಕುಸಿತ ಅನುಭವಿಸಿ 5,326.60 ಅಂಶಗಳಿಗೆ ತಲುಪಿದೆ. ಸೂಚ್ಯಂಕವು ಕನಿಷ್ಠ 5,314.60 ಅಂಕಗಳಿಂದ ಗರಿಷ್ಠ 5,360.25 ಅಂಶಗಳ ವರೆಗೆ ಏರಿಳಿತವನ್ನು ಕಂಡಿತ್ತು.

ಯುರೋಪ್ ವಲಯದಲ್ಲಿ ಸೃಷ್ಟಿಯಾಗಿರುವ ಸಾಲದ ಬಿಕ್ಕಟ್ಟನ್ನು ನಿಭಾಯಿಸಲು ಐರೋಪ್ಯ ಒಕ್ಕೂಟ ನಿರ್ಣಾಯಕ ನಿರ್ಧಾರ ತೆಗೆದುಕೊಂಡ ಹಿನ್ನಲೆಯಲ್ಲಿ ಕಳೆದ ವಾರ ಗೂಳಿ ಓಟ ಕಂಡಿದ್ದ ಭಾರತೀಯ ಮಾರುಕಟ್ಟೆಯು ವಾರಂತ್ಯಕ್ಕೆ ಶೇಕಡಾ 6.1ರಷ್ಟು ಏರಿಕೆಯನ್ನು ದಾಖಲಿಸಿತ್ತು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ