ಪ್ರಾರಂಭಿಕ ವಹಿವಾಟಿನಲ್ಲಿ ಸೂಚ್ಯಂಕದ ಏರಿಕೆ

ಬುಧವಾರ, 31 ಅಕ್ಟೋಬರ್ 2007 (11:38 IST)
ಮ್ಯುಚುವಲ್ ಫಂಡ್ ಕಂಪನಿಗಳು ಶೇರು ಖರೀದಿ ಪ್ರಕ್ರಿಯೆಯನ್ನು ಬುಧವಾರ ಕೂಡ ಮುಂದುವರಿಸಿದ್ದರಿಂದ ಬಿಎಸ್ಇ ಶೇರು ಸೂಚ್ಯಂಕದಲ್ಲಿ 125 ಅಂಕಗಳ ಏರಿಕೆಯಾಗಿದ್ದು, ಪರಿಣಾಮವಾಗಿ 19,908.47ನ್ನು ತಲುಪಿದೆ.

ಮಂಗಳವಾರ ದಿನದ ಅಂತ್ಯದ ವಹಿವಾಟಿನಲ್ಲಿ 196 ಅಂಶಗಳ ಕುಸಿತ ಅನುಭವಿಸಿದ್ದ ಬಿಎಸ್ಇ ಸಂವೇದಿ ಸೂಚ್ಯಂತವು ಇಂದು ನಡೆಸಿದ ಪ್ರಾಥಮಿಕ ಅವಧಿಯ ಐದು ನಿಮಿಷಗಳ ವಹಿವಾಟಿನಲ್ಲಿ 124.96 ಅಂಶಗಳ ಗಳಿಕೆ ಮಾಡಿತು.

ರಿಲೈಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರಟೆಲ್ ಮತ್ತು ಇನ್ಫೋಸಿಸ್ ಕಂಪನಿಗಳ ಶೇರುಗಳನ್ನು ಮ್ಯುಚುವಲ್ ಫಂಡ್ ಕಂಪನಿಗಳು ಭಾರಿ ಪ್ರಮಾಣದಲ್ಲಿ ಖರೀದಿ ನಡೆಸಿದವು.

ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಸಂವೇದಿ ಸೂಚ್ಯಂಕವು 45.15 ಅಂಶಗಳ ಏರಿಕೆಯೊಂದಿಗೆ ಪ್ರಾಥಮಿಕ ಅವಧಿಯ ವಹಿವಾಟಿನ ನಂತರ 5913.90ಕ್ಕೆ ತನ್ನ ವ್ಯವಹಾರವನ್ನು ಅಂತ್ಯಗೊಳಿಸಿದೆ.

ಅಮೆರಿಕದ ಫೆಡರಲ್ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸುವ ಸಾಧ್ಯತೆ ಇರುವುದರಿಂದ ಭಾರತೀಯ ಬ್ಯಾಂಕಿಂಗ್ ವಲಯದ ಶೇರುಗಳು ಶೇರು ವ್ಯಾಪಾರದಲ್ಲಿ ತಮ್ಮ ಮೌಲ್ಯ ಕಳೆದುಕೊಳ್ಳಲಿಲ್ಲ.

ವೆಬ್ದುನಿಯಾವನ್ನು ಓದಿ