ಬಜೆಟ್ ಪ್ರಭಾವ; ಸೆನ್ಸೆಕ್ಸ್ ಭಾರಿ ನೆಗೆತ

ಸೋಮವಾರ, 28 ಫೆಬ್ರವರಿ 2011 (11:45 IST)
ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವ ಬೆನ್ನಲ್ಲೇ ಏರುಗತಿ ಸಾಧಿಸಿರುವ ಮುಂಬೈನ ಬಿಎಸ್‌ಇ ಸೂಚ್ಯಂಕ ದಿನದ ಆರಂಭಿಕ ವಹಿವಾಟಿನಲ್ಲಿ 250 ಪಾಯಿಂಟುಗಳಷ್ಟು ಏರಿಕೆಯನ್ನು ಕಂಡಿದೆ.

ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಭಾಷಣ ಆರಂಭಿಸುತ್ತಿದ್ದಂತೆಯೇ ಶೇರುಪೇಟೆ 150ರಷ್ಟು ಪಾಯಿಂಟ್ ದಿಢೀರ್ ನೆಗೆತ ಕಂಡಿತ್ತು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ದಿನದ ಆರಂಭಿಕ ವಹಿವಾಟಿನಲ್ಲಿ 250 ಪಾಯಿಂಟ್ ಏರಿಕೆ ಕಂಡಿರುವ ಸೂಚ್ಯಂಕ 17,960 ಅಂಶಗಳಿಗೆ ತಲುಪಿದೆ. ಅದೇ ರೀತಿ ನಿಫ್ಟಿ 86 ಅಂಶ ಏರಿಕೆ ಕಂಡು 5389 ಪಾಯಿಂಟುಗಳಿಗೆ ತಲುಪಿದೆ.

ಒಎನ್‌ಜಿಸಿ, ಲಾರ್ಸೆನ್ ಮತ್ತು ಟೌರ್ಬೊ ಶೇರುಗಳು ಶೇಕಡಾ 3ರಷ್ಟು ಮುನ್ನಡ ಸಾಧಿಸಿದೆ. ಅದೇ ರೀತಿ ಸ್ಟೈರ್ಲೈಟ್, ಹಿಂದೂಸ್ತಾನ್ ಯುನಿಲಿವರ್, ರಿಲಯನ್ಸ್ ಮತ್ತು ಎಚ್‌ಡಿಎಫ್‌ಸಿ ಏರುಗತಿ ಕಂಡಿದೆ.

ವೆಬ್ದುನಿಯಾವನ್ನು ಓದಿ