ಬಜೆಟ್ ಪ್ಲಸ್ ಪಾಯಿಂಟ್; ಸೆನ್ಸೆಕ್ಸ್ ಏರಿಕೆ

ಸೋಮವಾರ, 28 ಫೆಬ್ರವರಿ 2011 (17:17 IST)
ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಕೇಂದ್ರ ಬಜೆಟ್ ಮಂಡಿಸಿದ ಬೆನ್ನಲ್ಲೇ ಮುಂಬೈನ ಬಿಎಸ್‌ಇ ಸೂಚ್ಯಂಕ ದಿನದ ವಹಿವಾಟಿನಲ್ಲಿ ಏರುಗತಿಯನ್ನು ಸಾಧಿಸಿದೆ.

122 ಅಂಶ ಏರಿಕೆ ಕಂಡಿರುವ ಸಂವೇದಿ ಸೂಚ್ಯಂಕವು 17,823ರಲ್ಲಿ ವಹಿವಾಟನ್ನು ಕೊನೆಗೊಳಿಸಿದೆ. ಪ್ರಣಬ್ ಮಂಡಿಸಿದ ಬಜೆಟ್‌ನಲ್ಲಿ ತೆರಿಗೆ ವಿಭಾಗದಲ್ಲಿ ಯಾವುದೇ ಋಣಾತ್ಮಕ ಯೋಜನೆ ಘೋಷಣೆಯಾಗದಿರುವುದು ಹಾಗೂ ದೃಢ ಆರ್ಥಿಕ ನೀತಿಗೆ ಒತ್ತು ನೀಡಿರುವುದು ಶೇರುಪೇಟೆ ಏರಿಕೆಗೆ ಕಾರಣವಾಗಿದೆ.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಕೂಡಾ 29 ಅಂಶ ಏರಿಕೆ ಕಂಡು 5,333 ಅಂಶಗಳಿಗೆ ತಲುಪಿದೆ. ಆರೋಗ್ಯ ಶೇರುಗಳನ್ನು ಹೊರತುಪಡಿಸಿ ಇತರೆಲ್ಲಾ ಶೇರುಗಳು ಏರಿಕೆಯನ್ನು ಕಂಡಿದೆ.

ದಿನದ ವಹಿವಾಟಿನಲ್ಲಿ ಐಟಿಸಿ ಶೇರುಗಳು ಗರಿಷ್ಠ ಶೇಕಡಾ 8ರಷ್ಟು ಏರುಗತಿ ಕಂಡಿದೆ. ಅದೇರಿ ರೀತಿ ಮಾರುತಿ ಸುಜುಕಿ ಶೇಕಡಾ 3ರಷ್ಟು ಏರಿಕೆಯನ್ನು ಕಂಡಿದೆ.

ವೆಬ್ದುನಿಯಾವನ್ನು ಓದಿ