ಮಹಾಶಿವರಾತ್ರಿ ಪ್ರಯುಕ್ತ ಇಂದು ವಹಿವಾಟು ಸ್ಥಗಿತ

ಬುಧವಾರ, 2 ಮಾರ್ಚ್ 2011 (11:24 IST)
ದೇಶದೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಬುಧವಾರ ಮುಂಬೈನ ಸಂವೇದಿ ಸೂಚ್ಯಂಕದ ವಹಿವಾಟು ಸ್ಥಗಿತವಾಗಲಿದೆ. ಬಿಎಸ್‌ಇ ಸಹಿತ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಕೂಡಾ ಮುಚ್ಚುಗಡೆಗೊಂಡಿರಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಸಗಟು ಮಾರಾಟ, ಸ್ಟೀಲ್, ಪ್ಲಾಸ್ಟಿಕ್ ಹಾಗೂ ಉಕ್ಕು ಮಾರುಕಟ್ಟೆಗಳೂ ಸಹ ಸ್ಥಗಿತವಾಗಲಿದೆ. ಆದರೆ ಚಿನಿವಾರ ಪೇಟೆಯು ಎಂದಿನಂತೆ ಕಾರ್ಯಚರಣೆ ಮಾಡಲಿದೆ ಎಂದು ತಿಳಿಸಲಾಗಿದೆ.

ಕಳೆದ ದಿನದ ವಹಿವಾಟಿನಲ್ಲಿ ಗೂಳಿ ಓಟ ನಡೆಸಿದ್ದ ಶೇರುಪೇಟೆ 623 ಅಂಶಗಳ ಭರ್ಜರಿ ಏರಿಕೆ ಕಂಡಿತ್ತು. ಇದು ಕಳೆದ 21 ತಿಂಗಳಲ್ಲಿಯೇ ಅತಿ ದೊಡ್ಡ ಗಳಿಕೆಯಾಗಿತ್ತು. ಆ ಮೂಲಕ ಸೂಚ್ಯಂಕ 18,446 ಅಂಶಗಳಿಗೆ ವಹಿವಾಟನ್ನು ಕೊನೆಗೊಳಿಸಿತ್ತು.

ಪಾರ್ಲಿಮೆಂಟ್‌ನಲ್ಲಿ ಸೋಮವಾರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಕೇಂದ್ರ ಬಜೆಟ್ ಮಂಡಿಸಿದ ಪರಿಣಾಮ ಮಾರುಕಟ್ಟೆಯೂ ಏರುಗತಿ ಕಾಣಿಸಿತ್ತು.

ವೆಬ್ದುನಿಯಾವನ್ನು ಓದಿ