ವಾರಂತ್ಯದ ವಹಿವಾಟಿನಲ್ಲಿ ಶೇರುಪೇಟೆ ಇಳಿಕೆ

ಶನಿವಾರ, 26 ಫೆಬ್ರವರಿ 2011 (15:31 IST)
ಶುಕ್ರವಾರದ ವಹಿವಾಟಿನಲ್ಲಿ ಅಲ್ಪ ಚೇತರಿಕೆ ಕಂಡಿದ್ದರ ಹೊರತಾಗಿಯೂ ಮುಂಬೈನ ಬಿಎಸ್‌ಇ ಶೇರು ಸೂಚ್ಯಂಕ ವಾರಂತ್ಯದ ವಹಿವಾಟಿನಲ್ಲಿ 2.8ರಷ್ಟು ಕುಸಿತ ಕಂಡಿದೆ.

ಶುಕ್ರವಾರದ ವಹಿವಾಟಿನಲ್ಲಿ ಮಾರುಕಟ್ಟೆ 68.50 ಪಾಯಿಂಟ್ ಅಥವಾ ಶೇಕಡಾ 0.4ರಷ್ಟು ಏರಿಕೆ ಕಾಣುವ ಮೂಲಕ 17.700.91ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.

ಇದರೊಂದಿಗೆ ಪ್ರಸಕ್ತ ವರ್ಷದಲ್ಲಿ ಶೇಕಡಾ 14ರಷ್ಟು ಕುಸಿತ ಅನುಭವಿಸಿರುವ ಭಾರತದ ಮಾರಕಟ್ಟೆ ವಿಶ್ವದಲ್ಲೇ ಅತಿ ಕಳಪೆ ಪ್ರದರ್ಶನ ನೀಡಿದ ಮೂರನೇ ಸೂಚ್ಯಂಕ ಎಂದೆನಿಸಿದೆ.

ಮಹೀಂದ್ರಾ ಆಂಡ್ ಮಹೀಂದ್ರಾ ಲಿಮಿಟೆಡ್ ಶೇಕಡಾ 3.4ರಷ್ಟು ಕುಸಿತ ಅನುಭವಿಸಿತ್ತು. ಇದೇ ವೇಳೆ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಶೇಕಡಾ 4.3ರ ಕುಸಿತವನ್ನು ಕಂಡಿದೆ.

ವೆಬ್ದುನಿಯಾವನ್ನು ಓದಿ