ವಾರದ ಶೇರು ಮಾರುಕಟ್ಟೆ ವಿಶ್ಲೇಷಣೆ

ಶನಿವಾರ, 15 ಸೆಪ್ಟಂಬರ್ 2007 (15:22 IST)
ಪೆಟ್ರೊ ಕೆಮಿಕಲ್ಸ್ ವಲಯದ ದೈತ್ಯ ರಿಲೈಯನ್ಸ್ ಕಂಪನಿಗಳ ಶೇರುಗಳು ಕಳೆದ ಒಂದು ವಾರದ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗಿದ್ದರಿಂದ ಶೇರು ಸೂಚ್ಯಂಕ ಏರುಗತಿಯಲ್ಲಿ ಸಾಗಲು ಕಾರಣ ಎಂದು ಶೇರು ಮಾರುಕಟ್ಟೆ ವಿಶ್ಲೇಷಣೆ ಮಾಡಿದೆ.

ರಿಲೈಯನ್ಸ್ ಕಂಪನಿಯು ಹಡಗು ನಿರ್ಮಾಣ ಮತ್ತು ಬಂದರುಗಳ ಹೂಳೆತ್ತುವ ಕೆಲಸಗಳನ್ನು ನಿರ್ವಹಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುವುದಕ್ಕೆ ಸಿದ್ದತೆ ನಡೆಸಿದೆ. ಮತ್ತು, ಸರಕಾರ ಅನಿಲ ಬೆಲೆ ನಿಗಧಿಗೆ ಕಂಪನಿ ನೀಡಿದ ಸಲಹೆಗಳಿಗೆ ಒಪ್ಪಿಕೊಂಡಿರುವುದರಿಂದ ಶೇರು ಮಾರುಕಟ್ಟೆಯಲ್ಲಿ ರಿಲೈಯನ್ಸ್ ಶೇರುಗಳ ಬೆಲೆಯಲ್ಲಿ ಶೇ 3.73 ರಷ್ಟು ಏರಿಕೆಯಾಗಿದೆ. ಒಟ್ಟಾರೆ ಕಂಪನಿಗಳ ಶೇರುಗಳ ಸೂಚ್ಯಂಕವು 2069ಕ್ಕೆ ತಲುಪಿರುವುದು ಬಿಎಸ್ಇಯಲ್ಲಿ ಭರವಸೆದಾಯಕ ವಾತಾವರಣ ನಿರ್ಮಿಸಿದೆ.

ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದಕ್ಕೆ ಎಡಪಕ್ಷಗಳು ಮತ್ತು ಯುಪಿಎ ನಡುವೆ ಉದ್ಭವಿಸಿರುವ ವಿವಾದ, ಸಬ್ ಪ್ರೈಮ್ ಕಂಪನಿಯ ಬಿಕ್ಕಟ್ಟು ಮತ್ತು ಇಂಗ್ಲೆಂಡ್‌ನಲ್ಲಿ ಕುಸಿದ ಔದ್ಯಮಿಕ ಉತ್ಪಾದನೆ ಶೇರು ಮಾರುಕಟ್ಟೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿದ್ದವು.

ಈ ತಿಂಗಳ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಬಂಡವಾಳವನ್ನು ಭಾರತೀಯ ಬಂಡವಾಳ ಮಾರುಕಟ್ಟೆಗೆ ಸುರಿದಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಅಂದಾಜು ಒಂದು ಬಿಲಿಯನ್ ಡಾಲರ್ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಶೇರು ಮಾರುಕಟ್ಟೆಗೆ ಪ್ರವೇಶಿಸಿದೆ.

ರಿಯಲ್ ಎಸ್ಟೇಟ್, ಬ್ಯಾಂಕ್, ಮತ್ತು ಸಿಮೆಂಟ್ ಕಂಪನಿಗಳ ಶೇರುಗಳ ಬೆಲೆಯಲ್ಲಿ ಏರಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ