ಶೇರುಗಳ ಖರೀದಿ ಭರಾಟೆ; ಮಾರುಕಟ್ಟೆ ಏರಿಕೆ

ಗುರುವಾರ, 31 ಮಾರ್ಚ್ 2011 (11:33 IST)
ವಿದೇಶ ಬಂಡವಾಳದ ಒಳಹರಿವಿನ ಹಿನ್ನಲೆಯಲ್ಲಿ ದಿನದ ಆರಂಭಿಕ ವಹಿವಾಟಿನಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕ 137 ಅಂಶಗಳಷ್ಟು ಏರಿಕೆಯನ್ನು ಕಂಡಿದೆ.

ಜಾಗತಿಕವಾಗಿ ತೈಲ ಬೆಲೆ ಇಳಿಕೆಯಾಗಿರುವುದು ಹಾಗೂ ಬೆಲೆಯೇರಿಕೆ ಭೀತಿ ದೂರವಾಗಿರುವುದು ಕೂಡಾ ಮಾರುಕಟ್ಟೆ ಏರಿಕೆಗೆ ಕಾರಣವಾಗಿದೆ. ದಿನದ ಆರಂಭಿಕ ವಹಿವಾಟಿನಲ್ಲಿ 137 ಪಾಯಿಂಟ್ ಏರಿಕೆ ಕಂಡಿರುವ ಸಂವೇದಿ ಸೂಚ್ಯಂಕವು 19,427.60 ಅಂಶಗಳಿಗೆ ತಲುಪಿದೆ.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಕೂಡಾ 38.05 ಪಾಯಿಂಟ್ ಏರಿಕೆ ಕಂಡು 5,825.70 ಅಂಶಗಳಿಗೆ ತಲುಪಿದೆ.

ವೆಬ್ದುನಿಯಾವನ್ನು ಓದಿ