ಸತತ 4ನೇ ದಿನದ ಕುಸಿತಕ್ಕೆ ಬ್ರೇಕ್; ಮಾರುಕಟ್ಟೆ ಏರಿಕೆ

ಮಂಗಳವಾರ, 28 ಫೆಬ್ರವರಿ 2012 (17:58 IST)
ಜಾಗತಿಕ ವಲಯಗಳಲ್ಲಿ ತೈಲ ಬೆಲೆ ಇಳಿಕೆ ಕಂಡಿರುವ ಬೆನ್ನಲ್ಲೇ ಸತತ ನಾಲ್ಕು ದಿನಗಳ ಕುಸಿತಕ್ಕೆ ಬ್ರೇಕ್ ಹಾಕಿರುವ ಮುಂಬೈನ ಸೂಚ್ಯಂಕವು ದಿನದ ವಹಿವಾಟಿನಲ್ಲಿ ಶೇಕಡಾ 1.64ರಷ್ಟು ಏರಿಕೆಯನ್ನು ಕಂಡಿವೆ.

ಮಂಗಳವಾರದ ವಹಿವಾಟಿನಲ್ಲಿ 185.37 ಪಾಯಿಂಟ್ ಏರಿಕೆ ಕಂಡಿರುವ ಸಂವೇದಿ ಸೂಚ್ಯಂಕವು 17731.12 ಅಂಶಗಳನ್ನು ತಲುಪಿದೆ. ಕಳೆದ ನಾಲ್ಕು ದಿನಗಳಲ್ಲಿ ಮಾರುಕಟ್ಟೆ 97 ಪಾಯಿಂಟುಗಳ ಹಿನ್ನಡೆ ಅನುಭವಿಸಿತ್ತು.

ಅದೇ ರೀತಿ ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಸಹ ಶೇಕಡಾ 1.79 ಅಥವಾ 94.30 ಪಾಯಿಂಟ್ ಏರಿಕೆ ಕಂಡು 5375.50 ಅಂಶಗಳಿಗೆ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಶೇರುಗಳು ಅತಿ ಹೆಚ್ಚು ಏರಿಕೆಯನ್ನು ಕಂಡಿತ್ತು.

ವೆಬ್ದುನಿಯಾವನ್ನು ಓದಿ