ಸೆನ್ಸೆಕ್ಸ್: ಅಲ್ಪ ಕುಸಿತ ಕಂಡ ಸಂವೇದಿ ಸೂಚ್ಯಂಕ

ಶುಕ್ರವಾರ, 13 ಸೆಪ್ಟಂಬರ್ 2013 (12:25 IST)
PTI
ರಿಟೇಲ್ ಹಣದುಬ್ಬರ ಕುಸಿತ ಮತ್ತು ಕೈಗಾರಿಕೆ ವೃದ್ಧಿ ದರದ ಚೇತರಿಕೆಯ ಮಧ್ಯೆಯೂ ಹೂಡಿಕೆದಾರರು ಶೇರುಗಳ ಮಾರಾಟಕ್ಕೆ ಆಸಕ್ತಿ ತೋರಿದ್ದರಿಂದ ಸೂಚ್ಯಂಕ 79 ಪಾಯಿಂಟ್‌ಗಳ ಕುಸಿತ ಕಂಡಿದೆ.

ಬ್ಯಾಂಕಿಂಗ್, ರಿಯಲ್ಟಿ, ತೈಲ ಮತ್ತು ಅನಿಲ ಹಾಗೂ ಗೃಹೋಪಕರಣ ವಸ್ತುಗಳ ಶೇರುಗಳ ವಹಿವಾಟು ಕುಸಿತ ಕಂಡಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 79.67 ಪಾಯಿಂಟ್‌ಗಳ ಕುಸಿತ ಕಂಡು 19,702.21 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 20.85 ಪಾಯಿಂಟ್‌ಗಳ ಕುಸಿತ ಕಂಡು 5829.85 ಅಂಕಗಳಿಗೆ ತಲುಪಿದೆ.

ಜುಲೈ ತಿಂಗಳ ಅವಧಿಯಲ್ಲಿ ರಿಟೇಲ್ ಹಣದುಬ್ಬರ ಕುಸಿತ ಮತ್ತು ಕೈಗಾರಿಕೆ ವೃದ್ಧಿ ದರದ ಚೇತರಿಕೆಯ ಮಧ್ಯೆಯೂ ಹೂಡಿಕೆದಾರರು ಶೇರುಗಳ ಮಾರಾಟಕ್ಕೆ ಮುಂದಾಗಿರುವುದು ಶೇರುಪೇಟೆಯ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.59 ರಷ್ಟು ಇಳಿಕೆ ಕಂಡಿದೆ. ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಕೂಡಾ ಶೇ.0.31 ರಷ್ಟು ಕುಸಿತ ಕಂಡಿದೆ.

ವೆಬ್ದುನಿಯಾವನ್ನು ಓದಿ