ಸೆನ್ಸೆಕ್ಸ್: ಅಲ್ಪ ಚೇತರಿಕೆಯೊಂದಿಗೆ ಶೇರುವಹಿವಾಟು ಆರಂಭ

ಮಂಗಳವಾರ, 22 ಅಕ್ಟೋಬರ್ 2013 (13:16 IST)
PTI
ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 31 ಪಾಯಿಂಟ್‌ಗಳ ಅಲ್ಪ ಚೇತರಿಕೆ ಕಂಡಿದೆ.

ಮಾಹಿತಿ ತಂತ್ರಜ್ಞಾನ, ವಿದ್ಯುತ್ ಮತ್ತು ಸಾರ್ವಜನಿಕ ಕ್ಷೇತ್ರದ ಶೇರುಗಳ ವಹಿವಾಟು ಚೇತರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 30.02 ಪಾಯಿಂಟ್‌ಗಳ ಏರಿಕೆ ಕಂಡು 20,948.91 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 2.95 ಪಾಯಿಂಟ್‌ಗಳ ಏರಿಕೆ ಕಂಡು 6,207.90 ಅಂಕಗಳಿಗೆ ತಲುಪಿದೆ.

ವಿಪ್ರೋ, ಟಾಟಾ ಪವರ್, ಕೋಲ್ ಇಂಡಿಯಾ, ಟಿಸಿಎಸ್, ಟಾಟಾ ಸ್ಟೀಲ್, ಹಿಂಡಾಲ್ಕೋ ಮತ್ತು ಬಿಎಚ್‌ಇಎಲ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ದಕ್ಷಿಣ ಕೊರಿಯಾ, ತೈವಾನ್, ಹಾಂಗ್‌ಕಾಂಗ್, ಚೀನಾ ಮತ್ತು ಇಂಡೋನೇಷ್ಯಾ ಶೇರುಗಳು ವಹಿವಾಟಿನಲ್ಲಿ ಶೇ.0.06 ರಿಂದ ಶೇ.0.12 ರಷ್ಟು ಚೇತರಿಕೆಯಾಗಿವೆ.

ವೆಬ್ದುನಿಯಾವನ್ನು ಓದಿ