ಸೆನ್ಸೆಕ್ಸ್: ಅಲ್ಪ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಗುರುವಾರ, 26 ಡಿಸೆಂಬರ್ 2013 (13:28 IST)
PTI
ಮಾಸಾಂತ್ಯದ ಹಿನ್ನೆಲೆಯಲ್ಲಿ ಹೂಡಿಕೆದಾರರು ಶೇರುಗಳ ಖರೀದಿಗೆ ನಿರಾಸಕ್ತಿ ತೋರಿದ್ದರೂ ಶೇರುಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 46 ಪಾಯಿಂಟ್‌ಗಳ ಏರಿಕೆ ಕಂಡಿದೆ.

ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನ ಮಧ್ಯೆ ವಾಹನೋದ್ಯಮ, ವಿದ್ಯುತ್, ಬಂಡವಾಳ ವಸ್ತುಗಳು ಮತ್ತು ರಿಯಲ್ಟಿ ಕ್ಷೇತ್ರದ ಶೇರುಗಳ ವಹಿವಾಟು ಏರಿಕೆಯಿಂದಾಗಿ ಸೂಚ್ಯಂಕ ಅಲ್ಪ ಚೇತರಿಕೆಯಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 45.93 ಪಾಯಿಂಟ್‌ಗಳ ಏರಿಕೆ ಕಂಡು 21,078.64 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 17.30 ಪಾಯಿಂಟ್‌ಗಳ ಏರಿಕೆ ಕಂಡು 6285.70 ಅಂಕಗಳಿಗೆ ತಲುಪಿದೆ.

ಒಎನ್‌ಜಿಸಿ, ಟಾಟಾ ಪವರ್, ಎಸ್‌ಎಸ್‌ಎಲ್‌ಟಿ, ಭಾರ್ತಿ ಏರ್‌ಟೆಲ್ ಮತ್ತು ಸನ್ ಫಾರ್ಮಾ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ವೆಬ್ದುನಿಯಾವನ್ನು ಓದಿ