ಸೆನ್ಸೆಕ್ಸ್: ಅಲ್ಪ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಮಂಗಳವಾರ, 31 ಡಿಸೆಂಬರ್ 2013 (13:13 IST)
PTI
ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 57 ಪಾಯಿಂಟ್‌ಗಳ ಏರಿಕೆ ಕಂಡಿದೆ.

ಏಷ್ಯಾ ಮಾರುಕಟ್ಟೆಗಳ ಸ್ಥಿರವಹಿವಾಟಿನಿಂದಾಗಿ ರಿಫೈನರಿ, ಉಕ್ಕು, ವಾಹನೋದ್ಯಮ, ಹೆಲ್ತ್‌ಕೇರ್ ಮತ್ತು ಬಂಡವಾಳ ವಸ್ತುಗಳು ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಚೇತರಿಕೆಯಾಗಿದೆ.

ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 56.64 ಪಾಯಿಂಟ್‌ಗಳ ಏರಿಕೆ ಕಂಡು 21,122.68 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 16.70 ಪಾಯಿಂಟ್‌ಗಳ ಏರಿಕೆ ಕಂಡು 6307.80 ಅಂಕಗಳಿಗೆ ತಲುಪಿದೆ.

ಟಾಟಾ ಪವರ್, ರಿಲಯನ್ಸ್ ಇಂಡಸ್ಟ್ರೀಸ್, ಕೋಲ್ ಇಂಡಿಯಾ, ಬಜಾಜ್ ಅಟೋ, ಟಾಟಾ ಮೋಟಾರ್ಸ್, ಗೇಲ್ ಇಂಡಿಯಾ ಮತ್ತು ಹಿರೋ ಮೋಟಾರ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆಯಾಗಿವೆ.

ಚೀನಾ, ಹಾಂಗ್‌ಕಾಂಗ್ ಮತ್ತು ಸಿಂಗಾಪೂರ್ ಶೇರುಪೇಟೆಗಳು ಶೇ.0.32 ರಿಂದ ಶೇ.0.87 ರಷ್ಟು ಏರಿಕೆ ಕಂಡಿದೆ.

ವೆಬ್ದುನಿಯಾವನ್ನು ಓದಿ