ಸೆನ್ಸೆಕ್ಸ್; ಕುಸಿತದೊಂದಿಗೆ ಶೇರುಪೇಟೆ ವಹಿವಾಟು ಆರಂಭ

ಬುಧವಾರ, 23 ಅಕ್ಟೋಬರ್ 2013 (12:37 IST)
PTI
ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 68 ಪಾಯಿಂಟ್‌ಗಳ ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಐಟಿ, ವಾಹನೋದ್ಯಮ, ರಿಯಲ್ಟಿ ಮತ್ತು ಬಂಡವಾಳ ವಸ್ತುಗಳ ಕ್ಷೇತ್ರದ ಶೇರುಗಳ ಮಾರಾಟಕ್ಕೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಸೂಚ್ಯಂಕ ಕುಸಿತ ಕಂಡಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ.

ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 68.27 ಪಾಯಿಂಟ್‌ಗಳ ಕುಸಿತ ಕಂಡು 20,796.70 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 23.40 ಪಾಯಿಂಟ್‌ಗಳ ಏರಿಕೆ ಕಂಡು 6179.40 ಅಂಕಗಳಿಗೆ ತಲುಪಿದೆ.

ವಿಪ್ರೋ, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಮೋಟಾರ್ಸ್, ಇನ್ಫೋಸಿಸ್ ಮತ್ತು ಡಾ.ರೆಡ್ಡಿ ಲ್ಯಾಬ್ ಕಂಪೆನಿಗಳ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.

ಹಾಂಗ್‌ಕಾಂಗ್‌, ಇಂಡೋನೇಷ್ಯಾ, ಸಿಂಗಾಪೂರ್ ಮತ್ತು ಜಪಾನ್ ಶೇರುಪೇಟೆಗಳು ಶೇ.0.14 ರಷ್ಟು ಕುಸಿತ ಕಂಡಿವೆ.

ವೆಬ್ದುನಿಯಾವನ್ನು ಓದಿ