ಸೆನ್ಸೆಕ್ಸ್: ಭರ್ಜರಿ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಗುರುವಾರ, 29 ಆಗಸ್ಟ್ 2013 (18:05 IST)
PTI
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಚೇತರಿಕೆ ಕಂಡಿದ್ದರಿಂದ, ಶೇರುಪೇಟೆ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 201 ಪಾಯಿಂಟ್‌ಗಳ ಏರಿಕೆ ಕಂಡಿದೆ.

ಗೃಹೋಪಕರಣ ವಸ್ತುಗಳು ಮತ್ತಿ ಮಾಹಿತಿ ತಂತ್ರಜ್ಞಾನದ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ಸರಕಾರಿ ಸ್ವಾಮ್ಯದ ಮೂರು ತೈಲ ಸಂಸ್ಥೆಗಳಿಗೆ ಅಗತ್ಯವಾದ ಡಾಲರ್‌ ಬೇಡಿಕೆಯನ್ನು ಪೂರೈಸುವುದಾಗಿ ಆರ್‌ಬಿಐ ಹೇಳಿಕೆ ನೀಡಿದ ನಂತರ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆಯಾಗಿದೆ.

ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 201.18 ಪಾಯಿಂಟ್‌ಗಳ ಏರಿಕೆ ಕಂಡು 18,205.49 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 53.95 ಪಾಯಿಂಟ್‌ಗಳ ಏರಿಕೆ ಕಂಡು 5,338.95 ಅಂಕಗಳಿಗೆ ತಲುಪಿದೆ.

ಎಚ್‌ಡಿಎಫ್‌ಸಿ, ಲಾರ್ಸನ್, ಟಿಸಿಎಸ್, ಭಾರ್ತಿ ಏರ್‌ಟೆಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಗೇಲ್ ಕಂಪನಿಗಳ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.

ವೆಬ್ದುನಿಯಾವನ್ನು ಓದಿ