ಸೆನ್ಸೆಕ್ಸ್: ಭರ್ಜರಿ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಶುಕ್ರವಾರ, 27 ಡಿಸೆಂಬರ್ 2013 (13:01 IST)
SUJENDRA
ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 127 ಪಾಯಿಂಟ್‌ಗಳ ಏರಿಕೆ ಕಂಡಿದೆ.

ವಿದೇಶಿ ಬಂಡವಾಳದ ಒಳಹರಿವು ಮತ್ತು ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನ ಮಧ್ಯೆ ರಿಯಲ್ಟಿ, ಐಟಿ, ತಂತ್ರಜ್ಞಾನ, ಗೃಹೋಪಕರಣ ವಸ್ತುಗಳು, ಉಕ್ಕು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಏರಿಕೆ ಕಂಡಿವೆ.

ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 126.57 ಪಾಯಿಂಟ್‌ಗಳ ಏರಿಕೆ ಕಂಡು 21,217.12 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 34.65 ಪಾಯಿಂಟ್‌ಗಳ ಏರಿಕೆ ಕಂಡು 6,313.55 ಅಂಕಗಳಿಗೆ ತಲುಪಿದೆ.

ಎಸ್‌ಎಸ್‌ಎಲ್‌ಟಿ, ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಮತ್ತು ಎಸ್‌ಬಿಐ ಶೇರುಗಳು ವಹಿವಾಟಿನಲ್ಲಿ ಭರ್ಜರಿ ಲಾಭದತ್ತ ಸಾಗಿವೆ.

ಚೀನಾ, ಹಾಂಗ್‌ಕಾಂಗ್, ತೈವಾನ್, ದಕ್ಷಿಣ ಕೊರಿಯಾ ಮತ್ತು ಸಿಂಗಾಪೂರ್ ಶೇರುಪೇಟೆಗಳು ಶೇ.0.14 ರಿಂದ ಶೇ.0.84 ಪಾಯಿಂಟ್‌ಗಳ ಏರಿಕೆ ಕಂಡಿದೆ.

ವೆಬ್ದುನಿಯಾವನ್ನು ಓದಿ