ಸೆನ್ಸೆಕ್ಸ್: ಶೇರುಪೇಟೆಯಲ್ಲಿ ಅಲ್ಪ ಕುಸಿತ ಕಂಡ ಸಂವೇದಿ ಸೂಚ್ಯಂಕ

ಸೋಮವಾರ, 30 ಡಿಸೆಂಬರ್ 2013 (12:42 IST)
PTI
ಹೂಡಿಕೆದಾರರು ಶೇರುಗಳ ಮಾರಾಟಕ್ಕೆ ಆಸಕ್ತಿ ತೋರಿದ್ದರಿಂದ ಶೇರುಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 11 ಪಾಯಿಂಟ್‌ಗಳ ಏರಿಕೆ ಕಂಡಿದೆ.

ಉಕ್ಕು ಮತ್ತು ವಾಹನೋದ್ಯಮ ಕ್ಷೇತ್ರದ ಶೇರುಗಳ ಖರೀದಿ ಹೆಚ್ಚಳದ ಮಧ್ಯೆಯೂ ಐಟಿ, ಬಂಡವಾಳ ವಸ್ತುಗಳು ಕ್ಷೇತ್ರದ ಶೇರುಗಳ ಮಾರಾಟದಿಂದಾಗಿ ಸೂಚ್ಯಂಕ ಅಲ್ಪ ಕುಸಿತ ಕಂಡಿದೆ.

ಬಿಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 11.00 ಪಾಯಿಂಟ್‌ಗಳ ಅಲ್ಪ ಕುಸಿತ ಕಂಡು 21,182.50 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 11.15 ಪಾಯಿಂಟ್‌ಗಳ ಕುಸಿತ ಕಂಡು 6302.65 ಅಂಕಗಳಿಗೆ ತಲುಪಿದೆ.

ಬಜಾಜ್ ಅಟೋ, ಲಾರ್ಸನ್, ವಿಪ್ರೋ ಮತ್ತು ಇನ್ಫೋಸಿಸ್ ಶೇರುಗಳು ವಹಿವಾಟಿನಲ್ಲಿ ಇಳಿಕೆ ಕಂಡಿವೆ.

ಏತನ್ಮಧ್ಯೆ, ಎಸ್‌ಎಸ್‌ಎಲ್‌ಟಿ, ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ ಮತ್ತು ಡಾ.ರೆಡ್ಡಿ ಲ್ಯಾಬ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.

ವೆಬ್ದುನಿಯಾವನ್ನು ಓದಿ