15 ಸಾವಿರ ದಾಟಿದ ಚಿನ್ನ ಬೆಲೆ

ಭಾನುವಾರ, 31 ಮೇ 2009 (11:33 IST)
ಚಿನಿವಾರ ಮಾರುಕಟ್ಟೆಯಲ್ಲಿ ಶನಿವಾರದ ವಹಿವಾಟಿನ ಅಂತ್ಯಕ್ಕೆ 10ಗ್ರಾಂ ಚಿನ್ನದ ದರ 15,000ರೂಪಾಯಿ ದಾಟಿದೆ. ಇದು ಕಳೆದ ಮ‌ೂರು ವಾರಗಳೆಡೆ ದಾಖಲಾದ ಅತೀ ಹೆಚ್ಚಿನ ಚಿನ್ನದ ದರವಾಗಿದೆ. ಶನಿವಾರದ ವಹಿವಾಟಿನ ಅಂತ್ಯಕ್ಕೆ ಚಿನ್ನದ ದರ 125 ರೂಪಾಯಿ ಏರಿಕೆ ಕಂಡು 15,100ರೂ.ಗಳಿಗೆ ತಲುಪಿದೆ. ಅದೇ ರೀತಿ ಬೆಳ್ಳಿ ದರ ಸಹ ಏರಿಕೆ ಕಂಡಿದ್ದು, ಕೆ.ಜಿಗೆ 23,200ರೂಪಾಯಿಗೆ ತಲುಪಿದೆ.

ವೆಬ್ದುನಿಯಾವನ್ನು ಓದಿ