ಸೆನ್ಸೆಕ್ಸ್: ಭಾರಿ ಚೇತರಿಕೆ ಕಂಡ ಶೇರುಪೇಟೆ ಸೂಚ್ಯಂಕ

ಸೋಮವಾರ, 3 ಆಗಸ್ಟ್ 2015 (18:06 IST)
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲಿರುವ ವಸೂಲಿಯಾಗದ ಸಾಲವನ್ನು ಕಡಿತಗೊಳಿಸುವುದಾಗಿ ಐಸಿಐಸಿಐ ಬ್ಯಾಂಕ್ ನೀಡಿದ ಹೇಳಿಕೆಯಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ ಚೇತರಿಕೆ ಕಂಡಿದೆ.
 
ಕಳೆದ ಗುರುವಾರದಂದು ಆರ್ಥಿಕ ಪರಿಷ್ಕರಣ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ರೆಪೋ ದರಗಳಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಕಚ್ಚಾ ತೈಲ ದರ ಕುಸಿತದಿಂದಾಗಿ ಆರ್‌ಬಿಐ ರೆಪೋ ದರಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬದಲಾವಣೆ ಮಾಡಬಹುದು ಎಂದು ಹೂಡಿಕೆದಾರರು ಭಾವಿಸಿದ್ದಾರೆ.
 
ಬಿಎಸ್‌ಇ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ ಶೇ.0.4 ರಷ್ಟು ಏರಿಕೆ ಕಂಡಿದ್ದರೆ ನಿಫ್ಟಿ ಸೂಚ್ಯಂಕ ಶೇ.0.34 ರಷ್ಟು ಚೇತರಿಕೆಯಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಬ್ಯಾಂಕ್‌ ಆಫ್ ಬರೋಡಾ, ಐಡಿಬಿಐ ಬ್ಯಾಂಕ್, ಕೆನರಾ ಬ್ಯಾಂಕ್,ಯುನಿಯನ್ ಬ್ಯಾಂಕ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ. 
 

ವೆಬ್ದುನಿಯಾವನ್ನು ಓದಿ