ಜಾಗತಿಕ ಮಾರುಕಟ್ಟೆ ದುರ್ಬಲ ವಹಿವಾಟು: ಭಾರಿ ಕುಸಿತ ಕಂಡ ಶೇರುಪೇಟೆ ಸೂಚ್ಯಂಕ

ಗುರುವಾರ, 11 ಫೆಬ್ರವರಿ 2016 (20:28 IST)
ಕಳೆದ ಆರು ತಿಂಗಳಲ್ಲಿ ಮೊದಲ ಬಾರಿಗೆ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 807.07 ಪಾಯಿಂಟ್‌ಗಳ ಕುಸಿತ ಕಂಡು ಪಾತಾಳಕ್ಕೆ ಇಳಿದಿದೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 807.07 ಪಾಯಿಂಟ್‌ಗಳ ಕುಸಿತ ಕಂಡು 22,951.83 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 239.35 ಪಾಯಿಂಟ್‌ಗಳ ಕುಸಿತ ಕಂಡು 6,976.35 ಅಂಕಗಳಿಗೆ ತಲುಪಿದೆ.
 
ಆದಾನಿ ಪೋರ್ಟ್ಸ್, ಬಿಎಚ್‌ಇಎಲ್, ಟಾಟಾ ಮೋಟಾರ್ಸ್, ಒಎನ್‌ಜಿಸಿ, ಎಂಆಂಡ್‌ಎಂ, ಟಾಟಾ ಸ್ಟೀಲ್, ಎಚ್‌ಡಿಎಫ್‌ಸಿ, ಎಕ್ಸಿಸ್ ಬ್ಯಾಂಕ್, ಗೇಲ್, ಮಾರುತಿ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಲುಪಿನ್ ಮತ್ತು ಐಟಿಸಿ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.
 
ಕೇವಲ ಸಿಪ್ಲಾ ಮತ್ತು ಡಾ.ರೆಡ್ಡಿ ಲ್ಯಾಬರೋಟರಿ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
 
ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ.4.64 ರಷ್ಟು ಕುಸಿತ ಕಂಡಿದ್ದರೆ, ಮಿಡ್-ಕ್ಯಾಪ್ ಸೂಚ್ಯಂಕ ಶೇ.3.27 ರಷ್ಟು ಇಳಿಕೆ ಕಂಡಿದೆ.
 
ಹಾಂಗ್‌ಕಾಂಗ್‌ ಶೇರುಪೇಟೆ ಸೂಚ್ಯಂಕ ಮೂರು ವರ್ಷಗಳ ಕನಿಷ್ಠ ಶೇ.3.85 ರಷ್ಟು ಕುಸಿತ ಕಂಡಿದೆ. ಯುರೋಪ್ ಮಾರುಕಟ್ಟೆಗಳು ಕೂಡಾ ವಹಿವಾಟಿನಲ್ಲಿ ಕುಸಿತ ಕಂಡಿವೆ ಎಂದು ಶೇರುಪೇಟೆ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ