ಸೆನ್ಸೆಕ್ಸ್: ಪಾತಾಳಕ್ಕೆ ಕುಸಿದ ಶೇರುಪೇಟೆ ಸಂವೇದಿ ಸೂಚ್ಯಂಕ

ಸೋಮವಾರ, 27 ಜುಲೈ 2015 (20:39 IST)
ಕಪ್ಪು ಹಣ ನಿಯಂತ್ರಣ, ತೆರಿಗೆ ಪದ್ದತಿ ಸೇರಿದಂತೆ ಸುಧಾರಿತ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವ ಸರಕಾರದ ಉದ್ದೇಶದಿಂದಾಗಿ ಹೂಡಿಕೆದಾರರು ಶೇರುಗಳ ಖರೀದಿಗೆ ನಿರಾಸಕ್ತಿ ತೋರಿದ್ದರಿಂದ ಶೇರುಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 500 ಪಾಯಿಂಟ್‌ಗಳ ಭಾರಿ ಕುಸಿತ ಕಂಡಿದೆ.  
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 155.25 ಪಾಯಿಂಟ್‌‌ಗಳ ಕುಸಿತ ಕಂಡು 8366.30 ಅಂಕಗಳಿಗೆ ತಲುಪಿದೆ. 
 
ಬಿಎಸ್‌ಇ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 490 ಪಾಯಿಂಟ್‌ಗಳ ಇಳಿಕೆ ಕಂಡು 28,112.31 ಅಂಕಗಳಿಗೆ ತಲುಪಿದೆ.
 
ಇಂದಿನ  ಆರಂಭಿಕ ವಹಿವಾಟಿನಲ್ಲೂ ಶೇರುಪೇಟೆಯ ಸೂಚ್ಯಂಕ ಬಾರಿ ಕುಸಿತ ಕಂಡಿತ್ತು. ಬ್ಲೂ-ಚಿಪ್ ಶೇರುಗಳು ಕೂಡಾ ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ