ವಾರದ ಅವಧಿಯಲ್ಲಿ 973.69 ಪಾಯಿಂಟ್‌ಗಳ ಕುಸಿತ ಕಂಡ ಸೂಚ್ಯಂಕ

ಶನಿವಾರ, 29 ಆಗಸ್ಟ್ 2015 (13:48 IST)
ವಾರಾಂತ್ಯಕ್ಕೆ ಶೇರುಪೇಟೆ ಸೂಚ್ಯಂಕ ಒಟ್ಟು 973.69 ಪಾಯಿಂಟ್‌ಗಳ ಕುಸಿತ ಕಂಡಿದೆ. ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಶೇ.2.59 ರಷ್ಟು ಇಳಿಕೆಯಾಗಿದೆ.
 
ಜಾಗತಿಕ ಮಾರುಕಟ್ಟೆಯ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 161 ಪಾಯಿಂಟ್‌ಗಳ ಚೇತರಿಕೆ ಕಂಡಿದೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 517 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 161.19 ಪಾಯಿಂಟ್‌ಗಳ ಏರಿಕೆ ಕಂಡು 26,392.38 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 53 ಪಾಯಿಂಟ್‌ಗಳ ಏರಿಕೆ ಕಂಡು 8,001.95 ಅಂಕಗಳಿಗೆ ತಲುಪಿದೆ.
 
ಸನ್‌ಫಾರ್ಮಾ, ಲುಪಿನ್, ಕೋಲ್ ಇಂಡಿಯಾ, ಟಿಸಿಎಸ್, ಐಟಿ, ಮೂಲಸೌಕರ್ಯ, ವಾಹನೋದ್ಯಮ, ತೈಲ ಮತ್ತು ಅನಿಲ  ಹಾಗೂ ಎಲ್‌ಆಂಡ್‌ಟಿ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
 
 

ವೆಬ್ದುನಿಯಾವನ್ನು ಓದಿ