ಜಿಡಿಪಿ ಡೇಟಾ: ಭರ್ಜರಿ ಚೇತರಿಕೆ ಕಂಡ ಶೇರುಸಂವೇದಿ ಸೂಚ್ಯಂಕ

ಮಂಗಳವಾರ, 1 ಡಿಸೆಂಬರ್ 2015 (14:48 IST)
ಸತತ ನಾಲ್ಕನೇ ದಿನವೂ ಶೇರುಪೇಟೆ ಚೇತರಿಕೆ ಕಂಡಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ 91 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶ, ಏಷ್ಯಾದ ಚೇತರಿಕೆಯ ವಹಿವಾಟು ಮತ್ತು ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.  
 
ಕಳೆದ ಮೂರು ದಿನಗಳ ವಹಿವಾಟಿನಲ್ಲಿ 369.92 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 91.45 ಪಾಯಿಂಟ್‌ಗಳ ಏರಿಕೆ ಕಂಡು 26,237.12 ಅಂಕಗಳಿಗೆ ತಲುಪಿದೆ.  
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 27.05 ಪಾಯಿಂಟ್‌ಗಳ ಏರಿಕೆ ಕಂಡು 7,962.30 ಅಂಕಗಳಿಗೆ ತಲುಪಿದೆ.
 
ಜಿಡಿಪಿ ಚೇತರಿಕೆ ಮತ್ತು ಏಷ್ಯಾ ಮಾರುಕಟ್ಟೆಗಳ ಭರ್ಜರಿ ವಹಿವಾಟು ದೇಶಿಯ ಸೇರುಪೇಟೆಯ ಮೇಲೆ ಪ್ರಭಾವ ಬೀರಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.1.48 ರಷ್ಟು ಏರಿಕೆಯಾಗಿದೆ. ಜಪಾನ್‌ನ ನಿಕೈ ಸೂಚ್ಯಂಕ ಕೂಡಾ ಶೇ.0.91 ರಷ್ಟು ಚೇತರಿಕೆ ಕಂಡಿದೆ. ಶಾಂಘೈ ಸೂಚ್ಯಂಕ ಕೂಡಾ ಶೇ.0.3 ರಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ