ಹೂಡಿಕೆದಾರರಿಂದ ಶೇರುಗಳ ಖರೀದಿ ಹೆಚ್ಚಳ: ಸೆನ್ಸೆಕ್ಸ್ ಚೇತರಿಕೆ

ಮಂಗಳವಾರ, 5 ಮೇ 2015 (14:35 IST)
ಸಾಗರೋತ್ತರ ಮಾರುಕಟ್ಟೆಗಳ ಭರ್ಜರಿ ವಹಿವಾಟು ದೇಶಿಯ ಶೇರುಪೇಟೆಯ ಮೇಲೆ ಪ್ರಭಾವ ಬೀರಿದ ಹಿನ್ನೆಲೆಯಲ್ಲಿ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 113 ಪಾಯಿಂಟ್‌ಗಳ ಏರಿಕೆ ಕಂಡಿದೆ.

ರಿಯಲ್ಟಿ, ಹೆಲ್ತ್‌ಕೇರ್, ತೈಲ ಮತ್ತು ಅನಿಲ, ವಾಹನೋದ್ಯಮ ಹಾಗೂ ಗೃಹೋಪಕರಣ ವಸ್ತು ಕ್ಷೇತ್ರಗಳ ಶೇರು ವಹಿವಾಟಿನಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 12.10 ಪಾಯಿಂಟ್‌ಗಳ ಏರಿಕೆ ಕಂಡು 8344.05 ಅಂಕಗಳಿಗೆ ತಲುಪಿದೆ.

ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇರುಪೇಟೆ ಶೇ.0.52 ರಷ್ಟು ಏರಿಕೆ ಕಂಡಿದ್ದರೆ, ಜಪಾನ್‌ನ ನಿಕೈ ಮಾರುಕಟ್ಟೆಗೆ ಇಂದು ರಜೆ ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ