ಸೆನ್ಸೆಕ್ಸ್: 103 ಪಾಯಿಂಟ್‌ಗಳ ಕುಸಿತ ಕಂಡ ಶೇರುಸೂಚ್ಯಂಕ

ಮಂಗಳವಾರ, 21 ಏಪ್ರಿಲ್ 2015 (14:10 IST)
ಶೇರುಪೇಟೆಯ ಸೂಚ್ಯಂಕ ಸತತ ಐದನೇ ದಿನವೂ ಕುಸಿತ ಕಂಡಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 103 ಪಾಯಿಂಟ್‌ಗಳ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಚಿಲ್ಲರೆ ವಹಿವಾಟುದಾರರು, ಬಂಡವಾಳ ಹೂಡಿಕೆದಾರರು ಹಾಗೂ ಕಾರ್ಪೋರೇಟ್ ಕಂಪೆನಿಗಳ ದುರ್ಬಲ ಫಲಿತಾಂಶದಿಂದಾಗಿ ಶೇರುಪೇಟೆ ಸೂಚ್ಯಂಕ ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಹೆಲ್ತ್‌ಕೇರ್, ಐಟಿ, ತಂತ್ರಜ್ಞಾನ, ಎಫ್‌ಎಂಸಿಜಿ, ವಾಹನೋದ್ಯಮ ಮತ್ತು ಬ್ಯಾಂಕಿಂಗ್‌ ಕ್ಷೇತ್ರದ ಶೇರುಗಳ ಮಾರಾಟದಿಂದಾಗಿ ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 103.90 ಪಾಯಿಂಟ್‌ಗಳ ಇಳಿಕೆ ಕಂಡು 27,782.31 ಅಂಕಗಳಿಗೆ ತಲುಪಿದೆ.

ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 42.30 ಪಾಯಿಂಟ್‌ಗಳ ಕುಸಿತ ಕಂಡು 8405.80 ಅಂಕಗಳಿಗೆ ತಲುಪಿದೆ.

ಹಾಂಗ್‌ಕಾಂಗ್ನ ಹಾಂಗ್‌ಸೆಂಗ್ ಶೇರುಪೇಟೆ ಶೇ.1.14 ರಷ್ಟು ಹಾಗೂ ಜಪಾನ್‌ನ ನಿಕೈ ಶೇರುಪೇಟೆ ಶೇ.0.90 ರಷ್ಟು ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.


ವೆಬ್ದುನಿಯಾವನ್ನು ಓದಿ