ಮಾಸಾಂತ್ಯದಿಂದ 55 ಪಾಯಿಂಟ್‌ಗಳ ಕುಸಿತ ಕಂಡ ಸಂವೇದಿ ಸೂಚ್ಯಂಕ

ಬುಧವಾರ, 26 ನವೆಂಬರ್ 2014 (13:21 IST)
ಜಾಗತಿಕ ಮಾರುಕಟ್ಟೆಗಳ ಮಿಶ್ರ ವಹಿವಾಟು ಮತ್ತು ಮಾಸಾಂತ್ಯದಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 55 ಪಾಯಿಂಟ್‌ಗಳ ಕುಸಿತ ಕಂಡಿದೆ.  
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 161.49 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 55.22 ಪಾಯಿಂಟ್‌ಗಳ ಕುಸಿತ ಕಂಡು 28,282.83 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 18.70 ಪಾಯಿಂಟ್‌ಗಳ ಇಳಿಕೆ ಕಂಡು 8444.40 ಅಂಕಗಳಿಗೆ ತಲುಪಿದೆ.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ ಶೇ.0.21 ರಷ್ಟು ಚೇತರಿಕೆ ಕಂಡಿದೆ. ಆದರೆ,
 
 
 

ವೆಬ್ದುನಿಯಾವನ್ನು ಓದಿ